ಭರ್ಜರಿ ಏರಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ! ಇಂದಿನ ದರ ಈ ರೀತಿ ಇದೆ
ಬಂಗಾರ ಅಂದ್ರೆ ದೂರ ಓಡುವಷ್ಟು ಬಂಗಾರದ ಬೆಲೆ ಏರಿಕೆಯಾಗಿದೆ. ಚಿನ್ನಾಭರಣ ಹಾಕಿಕೊಳ್ಳೋಕೇನೋ ಖುಷಿ ಆದ್ರೆ ದುಬಾರಿ ರೇಟ್ ಇದನ್ನು ಖರೀದಿ ಮಾಡೋ ಮುಂಚೆ ಹತ್ತು ಸಾರಿ ಯೋಚಿಸುವಂತೆ ಮಾಡಿದೆ.
ನಿಜಕ್ಕೂ ಒಂದು ಹತ್ತು ವರ್ಷದ ಹಿಂದೆ ಸಿಕ್ಕಾಪಟ್ಟೆ ಬಂಗಾರ ಮಾಡಿಸಿಕೊಂಡವರೇ ಅದೃಷ್ಟವಂತರು. ಈಗಿನ ಬೆಲೆಯಲ್ಲಿ ಅವುಗಳನ್ನು ಮಾಡಿದ್ರೂ ಕೂಡ ಅವರಿಗೆ ದುಪ್ಪಟ್ಟು ಲಾಭ ಸಿಗುತ್ತದೆ ನೋಡಿ. ಇದೇ ದೃಷ್ಟಿಯಲ್ಲಿ ಬೆಲೆ ಇಷ್ಟಿದ್ದರೂ ಸಹ ಬಂಗಾರದ ಅಂಗಡಿಗಳು ತುಂಬಿ ತುಳುಕುತ್ತಿರುತ್ತವೆ.
ನಿನ್ನೆ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಗುರುವಾರ ಏರಿವೆ. 22 ಕ್ಯಾರಟ್ ಚಿನ್ನದ ಬೆಲೆ 9,180 ರೂನಿಂದ 9,230 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 10,075 ರೂಗೆ ಏರಿದೆ. ಬೆಳ್ಳಿ ಬೆಲೆ ಕರ್ನಾಟಕ, ಮಹಾರಾಷ್ಟ್ರ ಮುಂತಾದ ಹೆಚ್ಚಿನ ಕಡೆ ಒಂದು ರೂ ಏರಿ 116 ರೂ ಮುಟ್ಟಿದೆ. ತಮಿಳುನಾಡು ಸೇರಿ ಕೆಲವೆಡೆ ಬೆಲೆ 126 ರೂಗೆ ಏರಿದೆ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,300 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,750 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,520 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,160 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,300 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,750 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,160 ರೂ