ಭಾರತದ ಕತ್ತಲ ಗ್ರಾಮಕ್ಕೆ ಬೆಳಕಾದ ಇಂಗ್ಲೆಂಡ್ ವಿದ್ಯಾರ್ಥಿನಿ!

Date:

ದೀಪದ ಕೆಳಗೆ ಕತ್ತಲು ಅನ್ನೋ ಹಾಗೆ ಇನ್ನು ಭಾರತದ ಸಾವಿರಾರು ಹಳ್ಳಿಗಳು ಇನ್ನು ಬೆಳಕೇ ಕಂಡಿಲ್ಲ. ನಡೆದಾಡಲು ಸರಿಯಾದ ರಸ್ತೆ ಇಲ್ಲದೆ, ಬಸ್ ಸೌಲಭ್ಯವಿಲ್ಲದೆ, ಕುಡಿಯಲು ನೀರು ಇಲ್ಲದೆ, ರಾತ್ರಿಯಾದರೆ ವಿದ್ಯುತ್ ಬೆಳಕು ಸಹ ಇಲ್ಲದೆ ಬದುಕುತ್ತಿರುವ ಜನ ಇಂದಿನ ಕಾಲದಲ್ಲಿಯೂ ಇದ್ದಾರೆ ಎಂದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.
ಇದೀಗ ಭಾರತ ವಿಶ್ವಮಟ್ಟದಲ್ಲಿ ಗುರುತ್ತಿಸಿಕೊಳ್ಳುತ್ತಿದೆ. ಆದ್ರೆ , ಭಾರತದಲ್ಲಿರೋ ನೂರಾರು ಅಧಿಕ ಹಳ್ಳಿಗಳು ಇನ್ನೂ ಬೆಳಕು ಕಂಡಿಲ್ಲ. ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇನ್ನು ಕೆಲವು ಹಳ್ಳಿಗಳು ವಿದ್ಯುತ್ ಸಂಪರ್ಕ ಅದೃಷ್ಟ ಪಡೆದುಕೊಂಡಿದ್ರೂ ಪ್ರತಿದಿನವೂ ವಿದ್ಯುತ್ ಪಡೆಯುವ ಅದೃಷ್ಟವಿಲ್ಲ. ಆದ್ರೆ ಈಗ ಈ ದುಃಸ್ಥಿತಿಯನ್ನು ಬದಲಿಸಲು ಇಂಗ್ಲೆಂಡ್ ನ ಇಂಪೀರಿಯಲ್ ಕಾಲೇಜ್ ನ ವಿದ್ಯಾರ್ಥಿ ಕ್ಲೆಮೆಂಟಿನ್ ಚಂಬನ್, ಮುಂದೆ ಬಂದಿದ್ದಾರೆ.


ಇವ್ರು ಉತ್ತರ ಪ್ರದೇಶದ ಕುಗ್ರಾಮಗಳ ಮನೆಗೆ ಪವರ್ ಕಟ್ ಇಲ್ಲದಂತೆ ಪವರ್ ಒದಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರ ಶ್ರಮದಿಂದ ಈಗಾಗಲೇ ಸುಮಾರು 100 ಮನೆಗಳಿಗೆ ಈ ವಿದ್ಯುತ್ ಭಾಗ್ಯ ಸಿಕ್ಕಿದೆ. ಊರ್ಜಾ ಸೋಶಿಯಲ್ ವೆಂಚರ್ ಸ್ಟಾರ್ಟ್ ಅಪ್ ಜೊತೆ ಕೈ ಜೋಡಿಸಿ ಸಾಮಾಜಿಕ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ಮಿನಿ ಸೋಲಾರ್ ಗ್ರಿಡ್ ಸ್ಥಾಪಿಸಿ, ಸುಮಾರು 1000 ಮನೆಗಳಿಗೆ ವಿದ್ಯುತ್ ಒದಗಿಸುವ ಸೌಲಭ್ಯವನ್ನು ಮಾಡುತ್ತಿದ್ದಾರೆ.
ವಿದ್ಯುತ್ ಹೊರತು ಪಡಿಸಿ ಸೋಲಾರ್ ಎನರ್ಜಿಯನ್ನು ಬಳಸಿಕೊಳ್ಳುವ ಬಗ್ಗೆಯೂ ಪ್ಲಾನ್ ಗಳು ನಡೆಯುತ್ತಿವೆ. ಸೋಲಾರ್ ಶಕ್ತಿಗೆ ಹೆಚ್ಚು ಮಾರ್ಕೆಟ್ ಕೂಡ ಸಿಗುತ್ತೆ. ಕಳೆದ ಮೂರು ವರ್ಷಗಳಲ್ಲಿ, ಭಾರತ ಸುಮಾರು 10,000 ಮೆಗಾವ್ಯಾಟ್ ಗಿಂತ ಅಧಿತ ವಿದ್ಯುತ್ ಅನ್ನು ಸೊಲಾರ್ ಮೂಲಕ ಉತ್ಪಾದಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಇದರ ಪ್ರಮಾಣ ಸುಮಾರು 20,000 ಮೆಗಾ ವ್ಯಾಟ್ ತಲುಪುವ ಸಾಧ್ಯತೆ ನಿಚ್ಚಳವಾಗಿದೆ.


ವಿದ್ಯುತ್ ಭಾಗ್ಯ ಪಡೆದ ಜನರ ಮುಖದಲ್ಲಿ ನಗು ಕಾಣುವುದೇ ಕ್ಲೆಮೆಂಟಿನ್ನವರಿಗೆ ಹೆಚ್ಚು ಸಂತಸ ತಂದುಕೊಡುತ್ತಂತೆ. ಈಗ ವಿದ್ಯುತ್ ಸಂಪರ್ಕದಿಂದಾಗಿ ಮಕ್ಕಳ ಓದು ಕೂಡ ಸುಗಮವಾಗುತ್ತಿದೆ. ಈ ಗ್ರಾಮಗಳಲ್ಲಿರುವ ಶಾಲೆಗಳಿಗೆ ನೀಡಿದ ವಿದ್ಯುತ್ ಸಂಪರ್ಕದಿಂದಾಗಿ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಸೇರಿದಂತೆ ಉತ್ತಮ ಶಿಕ್ಷಣ ಸಿಗುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸೊಲಾರ್ ಶಕ್ತಿಯ ಬಳಕೆಯಿಂದ ಗ್ರಾಮಗಳಲ್ಲಿ ಡಿಸೇಲ್ ಪಂಪ್ ಗಳ ಬಳಕೆ ಕಡಿಮೆಯಾಗಿದೆ.
ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದ ನೂರಾರು ಕುಟುಂಬವನ್ನು ಬೆಳಕಿಗೆ ತಂದಿದ್ದಾರೆ. ಇದೀಗ ಆ ಕುಟುಂಬಗಳು ಪ್ರತಿದಿನ ದೀಪಾವಳಿ ಹಬ್ಬ ಆಚರಿಸಿದಷ್ಟು ಸಂಭ್ರಮ ಪಡುತ್ತಿದ್ದಾರೆ. ಇಂಗ್ಲೆಂಡಿನ ಮಹಿಳೆ ಭಾರತದಲ್ಲಿ ನಿಸ್ವಾರ್ಥ ಸೇವೆ ಮಾಡ್ತಿರೋದು ಶ್ಲಾಘನೀಯ.

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...