ಮಂಡ್ಯದ ಹಳ್ಳಿಯೊಂದರಲ್ಲಿ ನಟ ದರ್ಶನ್ ಪ್ರಚಾರ ಮಾಡುತ್ತಿದ್ದಾಗ, ಕೆಲವು ಮಹಿಳಾ ಅಭಿಮಾನಿಗಳು ದರ್ಶನ್ ಅವರಲ್ಲಿ ಕೋರಿಕೆಯೊಂದನ್ನ ಇಟ್ಟರು. ದರ್ಶನ್ ಬಗ್ಗೆ ಒಂದು ಕವನ ಬರೆದಿದ್ದು ಅದನ್ನ ಓದುತ್ತೇನೆ ಎಂದು ಕೇಳಿಕೊಂಡರು ಅದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಪ್ಪಿಗೆ ಸೂಚಿಸಿದರು.
ನಂತರ ದರ್ಶನ್ ಅವರಿದ್ದ ತೆರೆದ ವಾಹನವನ್ನು ಏರಿದ ಆ ಮಹಿಳಾ ಅಭಿಮಾನಿ ತಮ್ಮ ನೆಚ್ಚಿನ ನಟ ಡಿ ಬಾಸ್ ಬಗ್ಗೆ ಒಂದು ಕವನ ಹೇಳುವುದರ ಮೂಲಕ ದರ್ಶನ್ ಅವರನ್ನು ಖುಷಿ ಪಡಿಸಿದರು.
ಇದನ್ನ ಕೇಳಿದ ನಂತರ ದರ್ಶನ್ ಅಭಿಮಾನಿಗೆ ಥ್ಯಾಂಕ್ಸ್ ಹೇಳಿ ಫೋಟೋಗೆ ಪೋಸ್ ಕೂಡಾ ಕೊಟ್ಟರು. ಇನ್ನು ಪ್ರಚಾರದ ನಡುವೆ ಹೂವಿನ ಹಾರಗಳನ್ನ ಹಾಕಲು ಅಭಿಮಾನಿಗಳು ತೆರೆದ ವಾಹನವನ್ನು ಏರಿ ಮೇಲೆ ಬರುತ್ತಿದ್ದರು.
ಅದನ್ನ ಪ್ರೀತಿಯಿಂದ ಸ್ವೀಕರಿಸುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೆಲ್ಫಿಗೆ ಪೋಸ್ ಕೂಡ ಕೊಟ್ಟರು. ಅನೇಕ ಕಡೆ ಮಕ್ಕಳು, ಮಹಿಳಾ ಅಭಿಮಾನಿಗಳು ದರ್ಶನ್ ಜೊತೆ ಫೋಟೋ ತೆಗಿಸಿಕೊಳ್ಳುವ ಮೂಲಕ ದರ್ಶನ್ ಜೊತೆ ಅಬ್ಬರದ ಪ್ರಚಾರದಲ್ಲಿ ಭಾಗಿಯಾದರು.