ಮಂಡ್ಯ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಪೈಪೋಟಿ ಇರುವುದರಿಂದ ಸ್ಟಾರ್ ವಾರ್ಗೆ ಮಂಡ್ಯ ಸಜ್ಜಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಹಿರಿಯ ನಟ ದೊಡ್ಡಣ್ಣ , ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.
ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ ಅವರೂ ಸಿನಿಮಾ ನಟರಾಗಿರುವುದರಿಂದ ಅವರ ಪರ ಯಾರು ಪ್ರಚಾರಕ್ಕೆ ಬರಬಹುದು ಅನ್ನೋ ಕುತೂಹಲವೂ ಇದೆ. ಆದರೆ, ಇಲ್ಲಿವರೆಗೆ ಯಾರೂ ಬಂದಿಲ್ಲ. ನಿಖಿಲ್ ನನಗೆ ಕಾರ್ಯಕರ್ತರೇ ಸೈನಿಕರು ಅಂದಿದ್ದಾರೆ.
ಈ ನಡುವೆ ದರ್ಶನ್, ಯಶ್ ಬಿಟ್ಟು ಉಳಿದ ಸ್ಟಾರ್ಗಳು ಯಾರ ಪರ ಪ್ರಚಾರ ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಹೀಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೂ ಈ ಪ್ರಶ್ನೆ ಎದುರಾಗಿತ್ತು. ಆಗ ಅವರು, ಈ ಬಗ್ಗೆ ಮಾತನಾಡೋದು ಬೇಡವೇ ಬೇಡ. ತಾವು ರಾಜಕೀಯದ ಬಗ್ಗೆ ಮಾತಾಡೋಲ್ಲ, ನನಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ನನ್ನ ರಾಜಕಾರಣಕ್ಕೆ ಎಳೀಬೇಡಿ ಎಂದರು. ಮತದಾನದ ಬಗ್ಗೆ ಮಾತ್ರ ಮಾತನಾಡಿ ಪ್ರತಿಯೊಬ್ಬರು ಓಟ್ ಹಾಕಲೇಬೇಕು, ಎಲ್ರೂ ಓಟ್ ಮಾಡಿ ಎಂದಿದ್ದಾರೆ,
ಮಂಡ್ಯದಲ್ಲಿ ಯಾರ ಪರ ಪ್ರಚಾರ ಮಾಡ್ತೀರಾ ಅಂದಿದ್ದಕ್ಕೆ ಆ್ಯಕ್ಷನ್ ಪ್ರಿನ್ಸ್ ಏನಂದ್ರು?
Date: