ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ?

Date:

ಮಂಡ್ಯ: ಮಂಡ್ಯದಲ್ಲಿ ಕಾಂಗ್ರೆಸ್ ಭಾರೀ ಮುಖಭಂಗ ಹಿನ್ನಲೆ ಸೋಲಿನ ಹೊಣೆ ಹೊರುತ್ತಾರಾ ಕೃಷಿ ಸಚಿವ? ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ತಮ್ಮ ರಾಜೀನಾಮೆ ಕುರಿತು ಸಚಿವ ಎನ್.ಚಲುವರಾಯಸ್ವಾಮಿ ಪ್ರಸ್ತಾಪಿಸಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಸ್ಟಾರ್ ಚಂದ್ರು ಸೋತರೆ ಸಚಿವ ಸ್ಥಾನಕ್ಕೆ‌ ರಾಜೀನಾಮೆ ಕೊಡಬೇಕಾಗುತ್ತೆ. ಚುನಾವಣೆ ಸೋತರೇ ನನಗೆ ಕೆಲಸ ಮಾಡುವುದಕ್ಕೆ ಮನಸು ಬರಲ್ಲ. ಟೇಬಲ್ ಕುಟ್ಟಲು ಆಗಲ್ಲ, ಸಂಪುಟದಲ್ಲಿ ತಲೆ ಎತ್ತಿ ಮಾತಾಡಲು ಆಗಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಕೆಲಸ ಮಾಡಬೇಕು. ಈ ಚುಣಾವಣೆಯಲ್ಲಿ ಸೋತರೆ ಅಳಲ್ಲ, ಯಾರ ಕೈಗೂ ಸಿಗುವುದಿಲ್ಲ. ಎರಡು ತಿಂಗಳು ಎಲ್ಲಾದರೂ ಹೊರಗಡೆ ಪ್ರವಾಸಕ್ಕೆ ಹೋಗುತ್ತೇನೆ.
ಮೊಬೈಲ್ನ ಹಳೇ ಸಿಮ್ ಕಿತ್ತೆಸೆದು ಹೊಸ ಸಿಮ್ ಹಾಕಿಕೊಳ್ತೇನೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿ, ನೆಮ್ಮದಿಯಾಗಿ ಇರ್ತೀನಿ ಎಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಚಲುವರಾಯಸ್ವಾಮಿ ಭಾಷಣ ಮಾಡಿದ್ದರು. ಸದ್ಯ ಈಗ ಮಂಡ್ಯದಲ್ಲಿ ಹೆಚ್ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ಜೆಡಿಎಸ್ ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ಅವರ ಭಾಷಣದ ವಿಡಿಯೋ ವೈರಲ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಲುವರಾಯಸ್ವಾಮಿ ರಾಜೀನಾಮೆ ಬಗ್ಗೆ ಚರ್ಚೆ ಜೋರಾಗಿದೆ.

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...