ಮಂಡ್ಯ ರಾಜಕೀಯದಲ್ಲಿ ಬಿರುಗಾಳಿ..! ಸುಮಲತಾ ಜೊತೆ ನಿಂತ ದರ್ಶನ್, ಯಶ್ ಎಂಬ ಜೋಡಿ ಎತ್ತುಗಳು..!

Date:

ಕೊನೆಗೂ ಮಂಡ್ಯ ಚುನಾವಣಾ ಕಣದಲ್ಲಿ ಬಿರುಗಾಳಿ ಎದ್ದಿದೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವುದು ಖಚಿತವಾಗಿದೆ, ಸುಮಲತಾ ಅಂಬರೀಷ್ ಅವರು ಪಕ್ಷೇತರಾಗಿ ಸ್ಪರ್ದಿಸುವುದರ ಮೂಲಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಇದರ ಸಲುವಾಗಿ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ”ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ” ಎಂದು ಘೋಷಣೆಯನ್ನು ಮಾಡುವುದರ ಮೂಲಕ ಇಷ್ಟು ದಿನಗಳು ಎಲ್ಲರಲ್ಲೂ ಕಾಡುತ್ತಿದ್ದ ಊಹಾ ಪೋಹಗಳಿಗೆಲ್ಲ ತೆರೆ ಎಳೆದಿದ್ದಾರೆ.

”ನನ್ನ ಜೊತೆ ಅಂಬರೀಶ್ ಅಭಿಮಾನಿಗಳಿದ್ದಾರೆ, ನನ್ನ ಹಿತೈಷಿಗಳಿದ್ದಾರೆ ಎಂಬ ಆತ್ಮವಿಶ್ವಾಸದಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ” ಎಂದು ಹೇಳಿದ ಸುಮಲತಾ ಅಂಬರೀಷ್. ”ಮಂಡ್ಯ ಜನರು ಅಂಬರೀಶ್ ಅವರ ಮೇಲೆ ಇಟ್ಟಿದ್ದ ಪ್ರೀತಿಯನ್ನ ನಾವು ಮರೆತಿಲ್ಲ. ಅವರು ಇದ್ದಾಗ ಇದ್ದ ಪ್ರೀತಿಯನ್ನ ಈಗಲೂ ಸಹ ಜನರೂ ನಮ್ಮ ಕುಟುಂಬದ ಮೇಲೆ ತೋರಿಸುತ್ತಿದ್ದಾರೆ. ಹಾಗಾಗಿ, ಅವರ ಋಣವನ್ನ ನಾನು ತೀರಿಸಬೇಕಾಗಿದೆ” ಎಂದು ಸುಮಲತಾ ಹೇಳಿದ್ದಾರೆ.

 

ಇದೇ ವೇಳೆ ಮಾರ್ಚ್ 20 ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುತ್ತಿರುವುದಾಗಿ ಹೇಳಿದ ಸುಮಲತಾ. ನಾಮಪತ್ರ ಸಲ್ಲಿಕೆ ವೇಳೆ ಅಂಬರೀಶ್ ಅಭಿಮಾನಿಗಳು ಮತ್ತು ಚಿತ್ರರಂಗದವರು ಸಾಥ್ ನೀಡಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

 

ಇಲ್ಲಿಯ ತನಕ ಸುಮಲತಾ ಅವರ ಪರ ಇಂಡಸ್ಟ್ರಿಯಲ್ಲಿ ಯಾರಿದ್ದಾರೆ, ಮಂಡ್ಯದಲ್ಲಿ ಚುನಾವನಾ ಪ್ರಚಾರಕ್ಕೆ ಯಾರೆಲ್ಲಾ ಬರುತ್ತಾರೆ ಎಂದು ಕೇಳುತ್ತಿದ್ದವರಿಗೆ ಇಂದು ಅಧಿಕೃತವಾಗಿ ಉತ್ತರ ಸಿಕ್ಕಂತಾಗಿದ್ದು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಸುಮಲತಾ ಅವರ ಪರ ಮಂಡ್ಯದಲ್ಲಿ ಫುಲ್ ಟೈಮ್ ಪ್ರಚಾರ ಮಾಡುವುದಾಗಿ ಘೋಶಿಸಿದ್ದಾರೆ. ಇವರ ಜೊತೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ

ಸುಮಲತಾ ಅಂಬರೀಶ್ ಅವರು ರಾಜಕೀಯಕ್ಕೆ ಬರುತ್ತಿರುವುದು ಯಾವುದೇ ಲಾಭಕ್ಕಾಗಿ ಅಲ್ಲ. ಅಂಬರೀಶ್ ಅವರ ಪರಂಪರೆಯನ್ನ ಮುಂದುವರಿಸುವುದು ನನ್ನ ಜವಾಬ್ದಾರಿ. ಅವರ ಪ್ರೀತಿಸುತ್ತಿದ್ದ ಜನರ ಋಣ ಮತ್ತು ಅವರ ಕಷ್ಟಗಳಲ್ಲಿ ನಾನು ಇರಬೇಕಾಗಿದೆ. ಅದಕ್ಕಾಗಿ ನಾನು ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತಿದ್ದೇನೆ” ಎಂದು ಸುಮಲತಾ ತಿಳಿಸಿದರು. ಅಲ್ಲದೆ ಇನ್ನು ಅನೇಕ ಕಲಾವಿದರು ಬರಲಿದ್ದು ಮುಂದಿನ ದಿನಗಳಲ್ಲಿ ಯಾರೆಲ್ಲ ಸುಮಲತಾ ಪರ ಪ್ರಚಾರ ಮಾಡಲಿದ್ದಾರೆ ಎಂಬುದು ತಿಳಿಯಲಿದೆ.

 

Share post:

Subscribe

spot_imgspot_img

Popular

More like this
Related

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಇಡೀ...

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು ಆಂಧ್ರಪ್ರದೇಶದ...

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ ನವದೆಹಲಿ: ಕನ್ನಡ ರಾಜ್ಯೋತ್ಸವ...