ಸರ್ಕಾರದ ಯೋಜನೆಗಳು ಇತ್ತೀಚೆಗೆ ಜನರನ್ನು ತಲುಪುತ್ತಿವೆ. ಆದರೆ ಎಲ್ಲಾ ಕಡೆ ಸೂಕ್ತವಾಗಿ ತಲುಪುತ್ತಿಲ್ಲ. ಅದಕ್ಕೆ ಸಾಕ್ಷಿ ಎಂದರೆ ಗ್ರಂಥಾಲಯಗಳು..! ಅದರಲ್ಲೂ ಬಹುತೇಕ ಹಳ್ಳಿಗಳಲ್ಲಿ ಗ್ರಂಥಾಲಯಗಳು ಕಾಣಿಸುವುದೇ ಇಲ್ಲ. ಇದನ್ನು ಗಮನಿಸಿದ ಸಮಾಜಸೇವಕರೊಬ್ಬರು ಗ್ರಾಮೀಣ ಮಕ್ಕಳಿಗಾಗಿ ಬರೋಬ್ಬರಿ 3055 ಗ್ರಂಥಾಲಯಗಳನ್ನು ಕಟ್ಟಿಸಿದ್ದಾರೆ. ಆ ಮೂಲಕ ಗ್ರಾಮೀಣ ಮಕ್ಕಳ ಬಾಳಲ್ಲಿ ಆಶಾ ಕಿರಣವಾಗಿದ್ದಾರೆ.
ಪ್ರದೀಪ್ ಲೋಖಂಡೆ ಎಂಬ ಸಮಾಜ ಸೇವಕರೊಬ್ಬರು ರೂರಲ್ ರಿಲೇಷನ್ ಎಂಬ ಸಂಸ್ಥೆ ಸ್ಥಾಪಿಸಿದ್ದು, ಅದರ ಆಶ್ರಯದಲ್ಲೇ ಗ್ರಾಮೀಣ ಮಕ್ಕಳಿಗೆ ಗ್ರಂಥಾಲಯ ನಿರ್ಮಿಸುವ ಕಾರ್ಯ ಮಾಡುತ್ತಿದ್ದಾರೆ. ಅತಿ ಹಿಂದುಳಿದ ಪ್ರದೇಶದಲ್ಲಿರುವ ಸುಮಾರು 3055 ಶಾಲೆಗಳನ್ನು ಗುರುತಿಸಿದ ಅವರು 1075 ದಿನಗಳ ಅಂತರದಲ್ಲೇ 3055 ಗ್ರಂಥಾಲಯ ನಿರ್ಮಿಸಿ ಅಕ್ಷರ ದಾನ ಮಾಡುತ್ತಿದ್ದಾರೆ. ಈ ಗ್ರಂಥಾಲಯದಿಂದ ಸುಮಾರು 6.70 ಲಕ್ಷ ಮಕ್ಕಳಿಗೆ ಉಪಯೋಗವಾಗುತ್ತಿದ್ದು, ಪ್ರದೀಪ್ ಲೋಖಂಡೆಯವರ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ.
11ರಿಂದ 16 ವರ್ಷದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡುವ ಪ್ರದೀಪ್ ರವರು ನೇರವಾಗಿ ಪುಸ್ತಕ ಮಾರಾಟಗಾರರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಇವರು ಒಮ್ಮೆಲೆ 5,555 ರೂಪಾಯಿಗಳ ಪುಸ್ತಕಗಳನ್ನು ಖರೀದಿಸುತ್ತಾರೆ. ಅದೂ ಕೂಡಾ ಅತೀ ಹೆಚ್ಚಿನ ಡಿಸ್ಕೌಂಟ್ ನಲ್ಲಿ. ಪ್ರದೀಪ್ ರವರ ಮತ್ತೊಂದು ವಿಶೇಷವೆಂದರೆ ಇವರು ಯಾವುದೇ ವ್ಯವಹಾರ ನಡೆಸಿದರೂ ಅದು ಪೋಸ್ಟ್ ಮೂಲಕವಾಗಿರುತ್ತದೆ. ಅಲ್ಲದೇ ಗ್ರಂಥಾಲಯಗಳಿಗೆ ಏನಾದರೂ ಅಗತ್ಯತೆಗಳು ಇದ್ದಲ್ಲಿ ಅದನ್ನು ಪೋಸ್ಟ್ ಕಾರ್ಡ್ ಮೂಲಕವೇ ವ್ಯವಹಾರ ನಡೆಸಬೇಕು.
ಪ್ರದೀಪ್ ಲೋಖಂಡೆಯವರು ಮುಂದಿನ ದಿನಗಳಲ್ಲಿ ಅತಿ ದೊಡ್ಡ ಕ್ರಾಂತಿಯನ್ನು ಮಾಡಲು ಮುಂದಾಗಿದ್ದಾರೆ. ಅದೇನೆಂದರೆ ಮಹಾರಾಷ್ಟ್ರದಲ್ಲಿರುವ 3055 ಗ್ರಂಥಾಲಯಗಳ ಸಂಖ್ಯೆಯನ್ನು 6700ಕ್ಕೆ ಏರಿಸಬೇಕು ಮತ್ತು ಇಡೀ ದೇಶದಲ್ಲಿ 85,000 ಗ್ರಂಥಾಲಯಗಳನ್ನು ತೆರೆಯಬೇಕು ಎಂಬ ಆಸೆ ಹೊಂದಿದ್ದಾರೆ. ಆದರೆ ಇದು ತೀರಾ ಕಷ್ಟವಾದರೂ ಛಲದ ಮುಂದೆ ಅಂಕೆ ಸಂಖ್ಯೆಗಳೂ ಸೋಲಬೇಕು ಎಂಬುದು ಪ್ರದೀಪ್ ಲೋಖಂಡೆಯವರ ಮಾತು.
ಸಾಮಾಜಿಕ ಕಾಳಜಿಯುಳ್ಳ ಪ್ರದೀಪ್ ಲೋಖಂಡೆಯವರು ತಮ್ಮ ಪ್ರಾಮಾಣಿಕ ಪರಿಶ್ರಮದಿಂದ ಮುಂಬೈನ ಹಳ್ಳಿಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಮಕ್ಕಳ ಜ್ಞಾನಾರ್ಜನೆಗೆ ಕಾರಣವಾಗಿದ್ದಾರೆ. ಅಲ್ಲದೇ ಬೆರಳ ತುದಿಯಲ್ಲೇ ಇಡೀ ಜಗತ್ತನ್ನೇ ತೋರಿಸುವ ಇಂಟನರ್ೆಟ್ ಯುಗದಲ್ಲೂ ಪುಸ್ತಕದ ಮೂಲಕ ಕ್ರಾಂತಿ ಮಾಡುತ್ತಿರುವ ಪ್ರದೀಪ್ ರವರ ಶ್ರಮಕ್ಕೊಂದು ಸಲಾಮ್