ಮಕ್ಕಳ ಜೀವದ ಜೊತೆ ವಾಹನ ಚಾಲಕರ ಚೆಲ್ಲಾಟ: ಕುಡಿದು ಶಾಲಾ ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದಾರೆ 118 ಚಾಲಕರು
ಬೆಂಗಳೂರು: ನಗರದ ಸಂಚಾರಿ ಪೊಲೀಸರು ಫೀಲ್ಡ್ಗೆ ಇಳಿದಿದ್ದು ಶಾಲಾ ವಾಹನಗಳ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ 118 ಚಾಲಕರು ಕುಡಿದು ಶಾಲಾ ವಾಹನ ಚಲಾಯಿಸಿ ಸಂಚಾರಿ ಪೊಲೀಸರಿಗೆ ಸಿಕ್ಕಿಬಿದಿದ್ದಾರೆ. ಸದ್ಯ ಈ 118 ಚಾಲಕರ ಡಿಎಲ್ ಸಸ್ಪೆಂಡ್ ಮಾಡಲಾಗಿದೆ. ಹೌದು ಸಂಚಾರಿ ಪೊಲೀಸರು ಎಷ್ಟೇ ಕೇಸ್ ಹಾಕಿದ್ರೂ ಕೂಡ ಮತ್ತೆ ಮತ್ತೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬೀಳ್ತಿದ್ದಾರೆ.
ಡಿಎಲ್ ಸಸ್ಪೆಂಡ್ ವಾರ್ನಿಂಗ್ ಗೂ ಸಹ ಚಾಲಕರು ಡೋಂಟ್ ಕೇರ್ ಎನ್ನದೇ ಮಕ್ಕಳಿದ್ದರು ಸಹ ಪಾನಮತ್ತರಾಗಿ ಡ್ರೈವ್ ಮಾಡುತ್ತಿದ್ದಾರೆ. ಕೇವಲ ಹತ್ತು ತಿಂಗಳ ಅವಧಿಯಲ್ಲಿ ಬರೋಬ್ಬರಿ 118 ಚಾಲಕರು ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸಿದ್ದು ಪತ್ತೆಯಾಗಿದೆ.
ಕಾಂಟ್ರ್ಯಾಕ್ಟ್ ಶಾಲಾ ವಾಹನಗಳ ಚಾಲಕರಿಂದಲೇ ಹೆಚ್ಚು ರೂಲ್ಸ್ ಬ್ರೇಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀರು ಆಯಾ ಶಾಲಾ ಆಡಳಿತ ಮಂಡಳಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದು, ಜನವರಿಯಲ್ಲಿ 16, ಫೆಬ್ರವರಿಯಲ್ಲಿ 7, ಜುಲೈನಲ್ಲಿ 23, ಆಗಸ್ಟ್ನಲ್ಲಿ 26, ಸೆಪ್ಟೆಂಬರ್ನಲ್ಲಿ 22, ನವೆಂಬರ್ನಲ್ಲಿ 24 ಪ್ರಕರಣ ದಾಖಲಾಗಿವೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.