ಇಷ್ಟು ದಿನ ತಂದೆ ತಾಯಿ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಎಂಬ ಕಾನೂನು ಇತ್ತು ಆದರೆ ಇದೀಗ ದೆಹಲಿಯ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು ಮಗ ಸಂಪಾದಿಸುವ ಹಣದಲ್ಲಿ ತಂದೆ ತಾಯಿಗೂ ಸಹ ಪಾಲಿದೆ ಎಂದು ಹೇಳಿದೆ.
ಇತ್ತೀಚೆಗೆ ನಡೆದ ಪ್ರಕರಣವೊಂದಕ್ಕೆ ದೆಹಲಿ ಕೋರ್ಟ್ ಈ ರೀತಿಯ ತೀರ್ಪನ್ನು ನೀಡಿದ್ದು ಕುಟುಂಬದಲ್ಲಿ ಹೆಂಡತಿ ಮತ್ತು ಮಕ್ಕಳು ಮಾತ್ರವಲ್ಲದೆ ತಂದೆತಾಯಿಗಳಿಗೂ ಸಹ ಮಗನ ಆದಾಯದಲ್ಲಿ ಪಾಲು ಇದೆ ಎಂದು ಹೇಳಿದೆ. ಇನ್ನೂ ಕೋರ್ಟ್ ನೀಡಿದ ಈ ತೀರ್ಪಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದ್ದು ನ್ಯಾಯಾಧೀಶರ ನಡೆಗೆ ಜನ ಜೈ ಎಂದಿದ್ದಾರೆ.