ಮಚ್ಚಿನಿಂದ ಹೊಡೆದು ತಂದೆಯನ್ನೇ ಬರ್ಬರವಾಗಿ ಕೊಂದ ಮಗ: ಆಸ್ತಿಗಾಗಿ ಕೃತ್ಯ!

Date:

 

ತುಮಕೂರು:- ಹುಟ್ಟುವಾಗ ಇರುವ ಸಂಬಂಧಗಳ ಮೌಲ್ಯ, ಬೆಳೆ-ಬೆಳೆಯುತ್ತಾ ಎಲ್ಲಿ ಹೋಗತ್ತೋ ಗೊತ್ತಿಲ್ಲ ಮರ್ರೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಕೊಲೆ, ಸುಲಿಗೆಗಳು ಹೆಚ್ಚಾಗುತ್ತಿದೆ.

ಅದರಂತೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ಮಚ್ಚಿನಿಂದ ಹೊಡೆದು ಮಗನಿಂದಲೇ ತಂದೆಯ ಭೀಕರ ಕೊಲೆ ನಡೆದಿರುವ ಘಟನೆ ಜರುಗಿದೆ.

ವೆಂಕಟಪ್ಪ ಮೃತ ದುರ್ದೈವಿ. ಸಿದ್ದಪ್ಪ ಎಂಬ ಮಗನಿಂದ ಕೃತ್ಯ ನಡೆದಿದೆ.

ಮೃತ ವೆಂಕಟಪ್ಪ ಮೂರೂವರೆ ಎಕರೆ ಆಸ್ತಿ ಹೊಂದಿದ್ದು, ಇತ್ತಿಚೆಗೆ ಆ ಜಮೀನು ಮಾರಾಟ ಮಾಡಿದ್ದ. ಮಾರಾಟ ಮಾಡಿದ್ದ ಜಮೀನಿನ ಹಣದಲ್ಲಿ 25 ಲಕ್ಷ ಹಣವನ್ನ ಮಗಳಿಗೆ ಕೊಟ್ಟಿದ್ದ. ಹಾಗೂ ಉಳಿದ ಜಮೀನನ್ನು ಸಹ ಮಗಳ ಹೆಸರಿಗೆ ಬರೆದುಕೊಟ್ಟಿದ್ದ ಎನ್ನಲಾಗಿದೆ.

ಇದೇ ವಿಚಾರಕ್ಕೆ ತಂದೆ ಮಗನ ಜೊತೆ ಹಲವು ಬಾರಿ ಗಲಾಟೆ ನಡೆದಿತ್ತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯತಿ ಕೂಡಾ ಮಾಡಲಾಗಿತ್ತು. ನ್ಯಾಯ ಪಂಚಾಯತಿ ಮಾಡಿದ್ರು ಸಹ ಮಗನಿಗೆ ಆಸ್ತಿ, ಹಣ ನೀಡಲು ತಂದೆ ವೆಂಕಟಪ್ಪ ಹಿಂದೇಟು ಹಾಕುತ್ತಿದ್ದ.

ಇದರಿಂದ ಬೇಸತ್ತ ಮಗ ತಂದೆಯ ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ತೀವ್ರ ರಕ್ತಸ್ರಾವದಿಂದ ವೃದ್ಧ ವೆಂಕಟಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಎಎಸ್ ಪಿ ಮರಿಯಪ್ಪ ಹಾಗೂ ಕೋಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಮನರೇಗಾವನ್ನು ಉಳಿಸಲು ಮಂಗಳವಾರ “ಲೋಕಭವನ ಚಲೋ”: ಡಿಸಿಎಂ ಡಿ.ಕೆ. ಶಿವಕುಮಾರ್

ಮನರೇಗಾವನ್ನು ಉಳಿಸಲು ಮಂಗಳವಾರ “ಲೋಕಭವನ ಚಲೋ”: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು: ಮನರೇಗಾ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಗೆ ಕಠಿಣ ಕ್ರಮ: ಅಲೋಕ್ ಕುಮಾರ್ ನೇತೃತ್ವದಲ್ಲಿ ಸುಧಾರಣೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಗೆ ಕಠಿಣ ಕ್ರಮ: ಅಲೋಕ್ ಕುಮಾರ್...

ಬಿಜೆಪಿ ರಾಷ್ಟ್ರ ಮುನ್ನಡೆಸಲು ಅಸಮರ್ಥ; ಮನರೇಗಾ ನಾಶಕ್ಕೆ ಹೊರಟಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ

ಬಿಜೆಪಿ ರಾಷ್ಟ್ರ ಮುನ್ನಡೆಸಲು ಅಸಮರ್ಥ; ಮನರೇಗಾ ನಾಶಕ್ಕೆ ಹೊರಟಿದ್ದಾರೆ: ಸಚಿವೆ ಲಕ್ಷ್ಮೀ...

77ನೇ ಗಣರಾಜ್ಯೋತ್ಸವ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ

77ನೇ ಗಣರಾಜ್ಯೋತ್ಸವ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ...