ಮಣ್ಣು ಕುಸಿತ: ಕೆರೆ ಕೋಡಿ ಕೆಲಸ ಮಾಡುತ್ತಿದ್ದ ಓರ್ವ ಸಾವು, ಇಬ್ಬರು ಗಂಭೀರ!

Date:

ಮಣ್ಣು ಕುಸಿತ: ಕೆರೆ ಕೋಡಿ ಕೆಲಸ ಮಾಡುತ್ತಿದ್ದ ಓರ್ವ ಸಾವು, ಇಬ್ಬರು ಗಂಭೀರ!

ಹಾಸನ:- ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹನಿಕೆ ಗ್ರಾಮದ ಬಳಿ ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿದಿದ್ದು, ಮಣ್ಣಿನಡಿ ಸಿಲುಕಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ.

ದರ್ಶನ್‌ಕುಮಾರ್ ಮೃತ ದುರ್ದೈವಿ. ವಸಂತ್‌ಕುಮಾರ್ ಹಾಗೂ ಲೋಕಪ್ಪ ಗಾಯಾಳುಗಳು ಎನ್ನಲಾಗಿದೆ. ಹಾಸನದ ಪ್ರಕಾಶ್ ಎಂಬುವವರು ಕೆರೆ ಕೋಡಿ ದುರಸ್ತಿ ಗುತ್ತಿಗೆ ಪಡೆದಿದ್ದು, ದರ್ಶನ್‌ಕುಮಾರ್, ವಸಂತ್‌ಕುಮಾರ್ ಹಾಗೂ ಲೋಕಪ್ಪ ಹನಿಕೆ ಗ್ರಾಮದ ಕೆರೆ ಕೋಡಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರ್ ಮಣ್ಣು ಕುಸಿದಿದೆ. ದರ್ಶನ್‌ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲೋಕಪ್ಪ ಹಾಗೂ ವಸಂತ್‌ಕುಮಾರ್ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ !

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ ! ಒಂಬತ್ತನೇ ದಿನ...

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...