ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ ದರ?
ಚಿನ್ನ ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕಣ್ಣಿಗೆ ಫಳ ಫಳ ಎಂದು ರಾಚಿಸುವ ಈ ಹಳದಿ ಬಣ್ಣದ ಅಪರೂಪದ ಲೋಹ ಕೇವಲ ಇಂದು ನಿನ್ನೆಯಲ್ಲ ಬದಲಾಗಿ ಅತಿ ಪ್ರಾಚೀನ ಕಾಲದಿಂದಲೂ ಪ್ರಾಮುಖ್ಯತೆ ಹೊಂದಿರುವ ಲೋಹವಾಗಿದೆ.
ಇದೀಗ ನಿನ್ನೆಗೆ ಹೋಲಿಸಿದರೆ ಚಿನ್ನದ ದರದಲ್ಲಿ ಇಂದು ಸಹ ಸಾಕಷ್ಟು ಏರಿಕೆಯಾಗಿ ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿದೆ. ಆದರೆ ಅದೇ ಬೆಳ್ಳಿ ದರದಲ್ಲಿ ಯಾವುದೇ ಕುಸಿತವಾಗಿಲ್ಲದಿರುವುದನ್ನು ನೋಡಬಹುದು.
ಡಿಸೆಂಬರ್ 22 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13528 ರೂಪಾಯಿ ಇದ್ದು, ಇಂದು 110 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,35,280 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 1,100 ರೂ ಹೆಚ್ಚಳ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ 1 ಗ್ರಾಂ ಬೆಲೆ 12400 ರೂಪಾಯಿ ಇದ್ದು, ಇಂದು 100 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,24,000 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 1000 ರೂ ಹೆಚ್ಚಳ ಆಗಿದೆ.
ಬೆಂಗಳೂರಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13528 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,35,280 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.
ಬೆಳ್ಳಿ ಬೆಲೆ ಭಾರಿ ಹೆಚ್ಚಳ
ಬೆಳ್ಳಿ ಬೆಲೆ ಇಂದು ಭಾರಿ ಏರಿಕೆ ಆಗಿದ್ದು, 5 ರೂ ಹೆಚ್ಚಳ ಆಗಿ ಬೆಲೆ 219 ರೂ ಆಗಿದ್ದು, ಕೆಜಿಗೆ 2,19,000 ರೂ ಇದೆ.






