ಕೆಲ ದಿನಗಳಿಂದ ಹುಚ್ಚವೆಂಕಟ್ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಮತ್ತೆ ಮತ್ತೆ ಸುದ್ದಿಯಲ್ಲಿದ್ದಾರೆ. ಚೆನ್ನೈನಲ್ಲಿ ಹುಚ್ಚನಂತೆ ತಿರುಗಾಡಿಕೊಂಡಿದ್ದ ನಟ ಹುಚ್ಚ ವೆಂಕಟ್ ಇದೀಗ ಮಡಿಕೇರಿಯಲ್ಲಿ ತನ್ನ ಹುಚ್ಚಾಟವನ್ನು ಮುಂದುವರೆಸಿದ್ದು.
ಮಡಿಕೇರಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇಂದು ಹುಚ್ಚ ವೆಂಕಟ್ ಕಾರಿನ ಗಾಜು ಪುಡಿ ಪುಡಿ ಮಾಡಿದ್ದಲ್ಲದೇ ಸಾರ್ವಜನಿಕರ ಮೇಲೂ ಹಲ್ಲೆ ಮಾಡಿದ್ದಾನೆ ಇದಕ್ಕೆ ಸಿಟ್ಟಿಗೆದ್ದ ಸಾರ್ವಜನಿಕರು ಹುಚ್ಚ ವೆಂಕಟ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವೆಂಕಟ್ ಹುಚ್ಚಾಟ ಮೀತಿ ಮೀರಿದಾಗ ಸ್ಥಳಕ್ಕೆ ಬಂದ ಮಡಿಕೇರಿ ಪೊಲೀಸರು ಹುಚ್ಚ ವೆಂಕಟ್ ರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಇದೀಗ ಸಾರ್ವಜನಿಕರು ಹುಚ್ಚ ವೆಂಕಟ್ ಗೆ ಸರಿಯಾದ ಚಿಕಿತ್ಸೆ ನೀಡಬೇಕೆಂದು ಹೇಳುತ್ತಿದ್ದಾರೆ.