ಜಕಾರ್ತಾ : ಮದುವೆಗೆ ಮುನ್ನವೇ ಲೈಂಗಿಕ ಸಂಬಂಧ ಹೊಂದಿದ್ದಕ್ಕೆ ಯುವಕನಿಗೆ 100 ಛಡಿಯೇಟಿನ ಶಿಕ್ಷೆ ನೀಡಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಯುವಕನೊಬ್ಬ ಮದುವೆಗೆ ಮುನ್ನ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದು, ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಆತ ಪ್ರಜ್ಞೆತಪ್ಪಿ ಬಿದ್ದರೂ ಮನಬಂದಂತೆ ಥಳಿಸಿದ್ದಾರೆಂದು ವರದಿಯಾಗಿದೆ.
ಇಂಡೋನೇಷ್ಯಾದ ಆಚೆ ಎನ್ನುವ ಪ್ರದೇಶದಲ್ಲಿ ಸ್ಥಳೀಯ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಸಾರ್ವಜನಿಕವಾಗಿ ಹೊಡೆಯುವುದು ಸಾಮಾನ್ಯವಾಗಿದೆ. ಇಲ್ಲಿ ಜೂಜು, ಮದ್ಯಪಾನ ಮತ್ತು ಸಲಿಂಗಕಾಮಿ, ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಶಿಕ್ಷೆ ನೋಡಲು ಅಲ್ಲಿ ಜಮಾಯಿಸಿದ್ದವರಲ್ಲಿ ಕೆಲವರು ‘ಕಠಿಣ, ಕಠಿಣ’, `ಕಾನೂನು ಉಲ್ಲಂಘಿಸಿದ್ದಕ್ಕಾಗಿ ಆತ ಎದುರಿಸಬೇಕಾದ ಪರಿಣಾಮವಿದು’ ಎಂದು ಕೂಗುತ್ತಿದ್ದರು ಎನ್ನಲಾಗಿದೆ. ಘಟನೆಗೆ ವಿಶ್ವವ್ಯಾಪಿ ಖಂಡನೆ ವ್ಯಕ್ತವಾಗಿದೆ.