ಲಕ್ನೋ:- ಮದುವೆಯಾಗುವುದಾಗಿ ನಂಬಿಸಿ ನರ್ಸ್ ಮೇಲೆ ಅತ್ಯಾಚಾರ ನಡೆಸಿದ 59ರ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ..
ಭದೋಹಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ಚಿಂತಾಮಣಿ ಶರ್ಮಾ ಎಂಬ ವ್ಯಕ್ತಿ 39 ವಯಸ್ಸಿನ ನರ್ಸ್ ಮೇಲೆ 21 ವರ್ಷಗಳ ಅವಧಿಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಕೇಳಿಬಂದಿದೆ.
ಆರೋಪಿ ವಿರುದ್ಧ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಬಿಹಾ ಖಾತೂನ್ ನ್ಯಾಯಾಲಯದಲ್ಲಿ ಸಂತ್ರಸ್ತೆ ನರ್ಸ್ ಪ್ರಕರಣದ ವಿಚಾರಣೆ ನಡೆಸಿತ್ತು. ಅರ್ಜಿಯನ್ನು ಆಲಿಸಿದ ಸಿಜೆಎಂ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಗುರುವಾರ ಪೊಲೀಸರಿಗೆ ಆದೇಶಿಸಿದ್ದರು.
ಸಂತ್ರಸ್ತೆ 15 ವರ್ಷ ವಯಸ್ಸಿನವಳಿದ್ದಾಗ ಅವಳನ್ನು ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಶರ್ಮಾ ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯ ಅಧ್ಯಯನಕ್ಕೆ ಸಹಾಯ ಮಾಡುವುದಾಗಿ ಕುಟುಂಬದವರಿಗೂ ಹತ್ತಿರವಾಗಿದ್ದ ಎಂದು ಭಾದೋಹಿ ಎಸ್‌ಪಿ ಮೀನಾಕ್ಷಿ ಕಾತ್ಯಾಯನ್ ತಿಳಿಸಿದ್ದಾರೆ.