ಟಾಪ್ ನಟಿಯೊಬ್ಬರು ಮದುವೆಗೆ ಮುನ್ನವೇ ಗರ್ಭಿಣಿ ಆಗಿದ್ದಾರೆ. ಮುಂದಿನ ವರ್ಷ ಮದುವೆ ಆಗುತ್ತಾರೆ ಎಂದು ತಿಳಿದುಬಂದಿದೆ. ಆ ನಟಿ ಯಾರಂದ್ರೆ ಆ್ಯಮಿ ಜಾಕ್ಸನ್.
ಕಳೆದ ಜನವರಿ 1ನೇ ತಾರೀಖು ಬಾಯ್ ಫ್ರೆಂಡ್ ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿರುವುದಾಗಿ ಘೋಷಿಸಿದ್ದ ಆ್ಯಮಿ ಜಾಕ್ಸನ್ , ಈಗ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದೇನೆ ಎಂದು ಘೋಷಿಸಿ ಬಿಟ್ಟಿದ್ದಾರೆ..!
ಆ್ಯಮಿ ಜಾಕ್ಸನ್ ಎಂಗೇಜ್ಮೆಂಟ್ ಫೋಟೋ ವೈರಲ್ ಆಗುತ್ತಿದ್ದಂತೆ ಅವರ ಮದುವೆ ಯಾವಾಗ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಾ ಇತ್ತು. ಅಭಿಮಾನಿಗಳು ಮದ್ವೆ ಡೇಟ್ ಯಾವಾಗ ಬಹಿರಂಗಪಡಿಸ್ತಾರೆ ಎಂದು ಕಾದಿದ್ದರು. ಆದರೆ ಆ್ಯಮಿ ಮದ್ವೆಗಿಂತಾ ಮೊದಲೇ ತಾಯಿ ಆಗುವ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ. 2020ರಲ್ಲಿ ಮದುವೆ ಆಗುತ್ತಾರೆ ಎಂದು ತಿಳಿದು ಬಂದಿದೆ.
ನನ್ನ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ ಎಂದು ಗರ್ಭಿಣಿ ಆಗಿರೋ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ ಆ್ಯಮಿ ಜಾಕ್ಸನ್.