ಮಲ್ಯ-ನೀರವ್‌ ಮೋದಿ ಮಾತ್ರವಲ್ಲ ಇನ್ನು 36 ಮಂದಿ ಉದ್ಯಮಿಗಳೂ ವಿದೇಶಕ್ಕೆ ಪರಾರಿ !!?

admin
By admin
0 Min Read

ಆರ್ಥಿಕ ವಂಚನೆ ಮಾಡಿ ಭಾರತದಿಂದ ಪರಾರಿಯಾಗಿರುವವರು ಬರೀ ವಿಜಯ್ ಮಲ್ಯ, ನೀರವ್ ಮೋದಿಯಂಥ ಬೆರಳೆಣಿಕೆಯ ಮಂದಿ ಮಾತ್ರವಲ್ಲ, ಇನ್ನೂ 36 ಉದ್ಯಮಿಗಳು ದೇಶದಿಂದ ಪರಾರಿ ಆಗಿದ್ದಾರೆ.

ಹಾಗಂತ ಇದು ಅಂತೆ-ಕಂತೆಗಳ ವಿಷಯವಲ್ಲ. ಏಕೆಂದರೆ ಖುದ್ದು ಜಾರಿ ನಿರ್ದೇಶನಾಲಯವೇ ತನಿಖಾ ದಳದ ವಿಶೇಷ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಅವರಿಗೆ ಇಂಥದ್ದೊಂದು ವಿಷಯವನ್ನು ಗಮನಕ್ಕೆ ತಂದಿದ್ದಾರೆ.

ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಸ್ಕಿ ಮಾತ್ರವಲ್ಲದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಇನ್ನೂ 36 ಉದ್ಯಮಿಗಳು ಆರ್ಥಿಕ ವಂಚನೆ ಹಾಗೂ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದು, ಅವರು ಭಾರತದಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ.

Share This Article