ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಜಸ್ವಂತ್ ಸಿಂಗ್ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜಸ್ವಂತ್ ಸಿಂಗ್(82) ಅವರನ್ನು ಕಳೆದ ಜೂನ್‌ನಲ್ಲೇ ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು(ಭಾನುವಾರ) ಬೆಳಗಿನ ಜಾವ ಸುಮಾರು 6:55ಕ್ಕೆ ಜಸ್ವಂತ್ ಸಿಂಗ್ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಜಸ್ವಂತ್ ಅವರು ದೇಶಕ್ಕಾಗಿ ಮೊದಲು ಸೈನಿಕರಾಗಿ ಸೇವೆ ಸಲ್ಲಿಸಿದ್ದು, ನಂತರ ರಾಜಕೀಯದೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಈ ನಿಧನದ ವಾರ್ತೆ ಕೇಳಿ ದುಃಖವಾಯಿತು ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ, ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಶ್ರೀ ಜಸ್ವಂತ್ ಸಿಂಗ್ ಜಿ ಅವರ ನಿಧನದಿಂದ ತೀವ್ರ ನೋವಾಗಿದೆ. ರಕ್ಷಣಾ ಮಂತ್ರಿ ಉಸ್ತುವಾರಿ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಅವರು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದರು. ಜಸ್ವಂತ್ ಅವರು ಪರಿಣಾಮಕಾರಿ ಸಚಿವರು ಮತ್ತು ಸಂಸದರು ಎಂದು ಗುರ್ತಿಸಿಕೊಂಡ ನಾಯಕರಾಗಿದ್ದರು ಎಂದಿದ್ದಾರೆ.
ಜಸ್ವಂತ್ ಸಿಂಗ್ ಅವರು ಬಿಜೆಪಿ ಪಕ್ಷದಿಂದ ಐದು ಬಾರಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ( 1980, 1986, 1998, 1999, 2004) ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. (1990, 1991,1996, 2009). ಕೇಂದ್ರ ಹಣಕಾಸು, ವಿದೇಶಾಂಗ, ಮತ್ತು ರಕ್ಷಣಾ ಖಾತೆಗಳಂತಹ ಪ್ರಮುಖ ಖಾತೆಗಳನ್ನು ಜಸ್ವಂತ್ ಸಿಂಗ್ ನಿಭಾಯಿಸಿದ್ದರು.
2020ರ ಜಗಮೆಚ್ಚಿದ ನಾಯಕರು ಇವರೇ ನೋಡಿ..!
ಎಸ್.ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ
ಇಂದಿನಿಂದ ‘ಪ್ರತಿಕ್ಷಣ ನಿಮ್ಮೊಂದಿಗೆ’ ನ್ಯೂಸ್ ಫಸ್ಟ್ ..!
IPL 2020 : ಉದ್ಘಾಟನಾ ಪಂದ್ಯದಲ್ಲಿ ಗೆದ್ದು ಬೀಗಿದ ಧೋನಿ ಪಡೆ ..!
ಧೋನಿ ಪಡೆಗೆ 163 ರನ್ ಗುರಿ ನೀಡಿದ ರೋಹಿತ್ ಪಡೆ..!
ಎಲ್ಲಿದ್ದೀಯಪ್ಪಾ ಮೋದಿ ಎಂದ ಸಿದ್ದರಾಮಯ್ಯ..!
ಅವಳಿಗಾಗಿಯೇ…! ಕೇವಲ 26 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರೇಮಿ ಕಥೆ..!
ಸಂಜೆ ಧೂಮಕೇತು ನೋಡೋದನ್ನು ಮಿಸ್ ಮಾಡ್ಕೋ ಬೇಡಿ – 6800 ವರ್ಷಗಳೊರೆಗೆ ಹಿಂತಿರುಗಲ್ಲ,…!
ನಿತ್ಯ ಭವಿಷ್ಯ : ಈ ದಿನ ಯಾರಿಗೆ ಸುದಿನ …? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲಗಳು…
ತನ್ನ ತಟ್ಟೆಯಲ್ಲಿ ಬೀದಿ ನಾಯಿಗಳಿಗೆ ಊಟ ನೀಡಿದ ಭಿಕ್ಷುಕ …ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ …
ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಆದೇಶ
ಧ್ರುವಾ ಸರ್ಜಾ ದಂಪತಿಗೆ ಕೊರೋನಾ …!
ಅಂದು ಸೈಕಲ್ ನಲ್ಲಿ ಮನೆಗೆ ಹಾಲು ಹಾಕ್ತಿದ್ದವರು ಇಂದು…?
ಸರ್ಕಾರಿ ಕೆಲಸಬಿಟ್ಟು ರೈತನಾದ ಇಂಜಿನಿಯರ್ ಸ್ಟೋರಿ ..!
ನಿತ್ಯ ಭವಿಷ್ಯ : ಈ ರಾಶಿಯವರಿಗೆ ಮಾತೇ ಸಮಸ್ಯೆ ತಂದೊಡ್ಡುತ್ತದೆ ..!
ಹುಡುಗರು ಹೆಚ್ಚು ಆಕರ್ಷಿತರಾಗೋದು ಚಂದದ ಹುಡ್ಗೀರಿಲ್ಲ..! ಮತ್ತೆ?
ದ್ವಿತೀಯ ಪಿಯುಸಿ ಫಲಿತಾಂಶ : ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ..! ಯಾವ ಜಿಲ್ಲೆ ಫಸ್ಟ್? ಯಾವ್ದು ಲಾಸ್ಟ್?
ಯಾರ್ ಬೇಕಿದ್ರು ಕೃಷಿ ಭೂಮಿ ಖರೀಸಬಹುದೆಂಬ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ..!
ಕೊರೋನಾ ದೆಸೆಯಿಂದ ಸೆಕ್ಯುರಿಟಿ ಗಾರ್ಡ್ ಆದ ಸ್ಯಾಂಡಲ್ ವುಡ್ ಜನಪ್ರಿಯ ನಟ ..!
ನಿತ್ಯಭವಿಷ್ಯ : ಈ ಶುಭ ಮಂಗಳವಾರದ ರಾಶಿ ಭವಿಷ್ಯ
ಇಲ್ಲಿದೆ ಸರ್ಕಾರ ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿ ..! ಏನಿರುತ್ತೆ ? ಏನಿರಲ್ಲ?