ಮಾಜಿ ಸಿಎಂ‌‌ ಮಗನನ್ನು ಸೋಲಿಸಲು ಮೈತ್ರಿ ಸ್ಟಾರ್ ಶಿವಮೊಗ್ಗಕ್ಕೆ‌ ಎಂಟ್ರಿ..!

Date:

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದಲ್ಲಿ ಏಪ್ರಿಲ್‌ 18 ಮತ್ತು 23 ರಂದು‌ ಎರಡು‌ ಹಂತಗಳಲ್ಲಿ‌ ಚುನಾವಣೆ ನಡೆಯಲಿದೆ. ಪ್ರಮುಖವಾಗಿ ಒಂದು ಕಡೆ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನವನ್ನು ಗೆಲ್ಲುವ ತವಕದಲ್ಲಿದೆ. ಇನ್ನೊಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಚುನಾವಣೆಯನ್ನು ಎದುರಿಸುತ್ತಿವೆ.
ಪ್ರಮುಖವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಈ‌ ಕೋಟೆನ್ನು ಛಿದ್ರ ಮಾಡಲು ಮೈತ್ತಿ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.
ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನ ಮಧು ಬಂಗಾರಪ್ಪ ಅವರು ಕಣಕ್ಕೆ ಇಳಿಯುತ್ತಾರೆ. ಬಿಜೆಪಿಯಿಂದ ಕಣದಲ್ಲಿರುವುದು ಹಾಲಿ ಸಂಸದ ಬಿ.ವೈ ರಾಘವೇಂದ್ರ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮಗನಾಗಿರುವ ರಾಘವೇಂದ್ರ ಅವರನ್ನು ಶತಾಯಗತಾಯ ಸೋಲಿಸಲು ಮಧು ಬಂಗಾರಪ್ಪ ಟ್ರಬಲ್ ಶೂಟರ್ ಖ್ಯಾತಿಯ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಶಿವಮೊಗ್ಗ ಚುನಾವಣಾ ಉಸ್ತುವಾರಿವಹಿಸಿಕೊಳ್ಳಲು ಕೇಳಿಕೊಂಡಿದ್ದಾರೆ.‌
ಮೈತ್ರಿ ಶಿವಕುಮಾರ್ ಅವರನ್ನು ಶಿವಮೊಗ್ಗಕ್ಕೆ‌ ಕಳುಹಿಸಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿಕೊಳ್ಳಲು ಪ್ಲಾನ್ ಮಾಡಿದೆ. ಬಿಜೆಪಿ ಭದ್ರಕೋಟೆಗೆ ನುಗ್ಗಿ ರಾಘವೇಂದ್ರ ಅವರನ್ನು ಸೋಲಿಸಿ, ತಮ್ಮ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಚಾಣಕ್ಯ ಡಿಕೆಶಿ‌ ಯಶಸ್ವಿಯಾಗ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...