ಅಭಿಷೇಕ್​ ಅಂಬರೀಶ್ ಬಗ್ಗೆ ಸುದೀಪ್ ಹೀಗೆ ಹೇಳ್ತಾರಂತ ಯಾರೂ ಊಹಿಸಿರಲಿಲ್ಲ..!

Must read

ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ ಅಮರ್ ರಿಲೀಸ್ ಆಗಿದೆ. ಅಭಿಷೇಕ್ ತಮ್ಮ ಚೊಚ್ಚಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಕನ್ನಡದಲ್ಲಿ ಮತ್ತೊಬ್ಬ ಆರರಿ ಕಟೌಟ್ ಆಗಿ ನೆಲೆ ನಿಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ.
ಅಭಿಷೇಕ್ ಅಂಬರೀಶ್ ಅವರ ಸಿನಿಮಾಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೇರಿದಂತೆ ಅನೇಕ ಗಣ್ಯರು ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಈ ಎಲ್ಲಾ ಸುದ್ದಿಗಳನ್ನು ನೀವು ಓದಿರ್ತೀರಿ. ಅದಲ್ಲದೆ ಟೀಮ್ ಇಂಡಿಯಾದ ಕ್ರಿಕೆಟಿಗ, ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದು ಇಂಗ್ಲೆಂಡ್​ ಗೆ ಹೋಗಿರುವ ಹೆಮ್ಮಯ ಕನ್ನಡಿಗ ಕೆ.ಎಲ್ ರಾಹುಲ್ ಅವರು ಸಹ ಅಭಿಷೇಕ್​ ಗೆ ವಿಶ್ ಮಾಡಿದ್ದಾರೆ. ಆದರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೀಗೆ ಹೇಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ..!
ಅಂದರೆ ಸುದೀಪ್ ಹೇಳ ಬಾರದನ್ನು ಹೇಳಿಲ್ಲ.. ಜೊತೆಯಾಗಿ ಸಿನಿಮಾ ಮಾಡಣ ಎಂದಿದ್ದಾರೆ..! ಸುದೀಪ್ ಅಭಿಗೆ ಇಷ್ಟು ಬೇಗ ಹೀಗೆ ಹೇಳ್ತಾರಂತ ಯಾರೂ ಊಹಿಸಿರಲಿಲ್ಲ.
ಅಮರ್​ ಚಿತ್ರಕ್ಕೆ ವಿಶ್ ಮಾಡಿ ಟ್ವೀಟರನ್​ ನಲ್ಲಿ ವಿಡಿಯೋ ಅಪ್ ಡೇಟ್ ಮಾಡಿರುವ ಸುದೀಪ್, ಅಭಿ ಸಿನಿ ಜರ್ನಿಗೆ ಸ್ವಾಗತ ಮಾಡಿದ್ದಾರೆ. ನಿಮಗೆ ಎರಡು ಒತ್ತಡ ಇದೆ. ಒಂದು ಸಹಜವಾಗಿ ಮೊದಲ ಸಿನಿಮಾ. ಇನ್ನೊಂದು ಅಂಬರೀಶ್ ಅವರ ಮಗ ಆಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ನಿಮಗೆ ಒಳ್ಳೆಯದಾಗಲಿ. ನಾವು ಸಿನಿಮಾ ರಂಗದಲ್ಲಿ ಒಟ್ಟಿಗೆ ಸಾಗೋಣ. ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದಾರೆ. ತಾನು ತನ್ನ ಕುಟುಂಬ ಸಮೇತವಾಗಿ ಅಮರ್ ಸಿನಿಮಾ ನೋಡುವುದಾಗಿ ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article