ಮಾನವೀಯತೆ ಮೆರೆದ ಬಸ್ ಡ್ರೈವರ್, ಕಂಡಕ್ಟರ್, ಪ್ರಯಾಣಿಕರು..!

Date:

ಮಂಗಳೂರು : ಚಲಿಸುತ್ತಿದ್ದ ಬಸ್​​​​ನಲ್ಲಿ ಮಹಿಳೆಗೆ ಎದೆನೋವು ಕಾಣಿಸಿಕೊಂಡಿದ್ದು, ತಡಮಾಡದೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಖಾಸಗಿ ಬಸ್ ಡ್ರೈವರ್, ಕಂಡಕ್ಟರ್ ಮತ್ತು ಪ್ರಯಾಣಿಕರು ಮಾನವೀಯತೆ ಮೆರೆದಿದ್ದಾರೆ,
ತಲಪಾಡಿ ಕಿನ್ಯಾದಿಂದ ಸ್ಟೇಟ್ ಬ್ಯಾಂಕಿಗೆ ಸಂಚರಿಸುವ `ಮಹೇಶ್’ ಹೆಸರಿನ ಖಾಸಗಿ ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಸ್ಪಂದಿಸಿದ ಬಸ್ಸಿನ ಚಾಲಕ ಪ್ರಮೋದ್ ಮತ್ತು ನಿರ್ವಾಹಕ ಅಶ್ವಿತ್ ಆಕೆಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಯಾಣಿಕರು ಕೂಡ ಬಸ್ ನಿಲ್ಲಿಸದೆ ನೇರವಾಗಿ ಆಸ್ಪತ್ರೆಗೆ ಹೋಗಲು ಸಹಕರಿಸಿದ್ದಾರೆ.
ಕರಾವಳಿ ಶ್ರಮಿಕ ಸಂಘದ ಖಾಸಗಿ ಬಸ್ ಚಾಲಕರ ಹಾಗೂ ನಿರ್ವಾಹಕರ ಸಂಘದ ಸದಸ್ಯರು ಹಾಗೂ ಮಹೇಶ್ ಬಸ್ಸಿನ ಚಾಲಕ, ನಿರ್ವಾಹಕರ ಮಾನವೀಯ ಕಾರ್ಯಕ್ಕೆ ಇದೀಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಸೋಮವಾರ ಬೆಳಿಗ್ಗೆ 10.30ರ ಸುಮಾರಿಗೆ ಕಿನ್ಯಾದಿಂದ ಸ್ಟೇಟ್ ಬ್ಯಾಂಕಿಗೆ ಹೊರಟಿದ್ದ ಬಸ್ಸಿನಲ್ಲಿ ಮೀನಾದಿ ನಿವಾಸಿ ಭಾಗ್ಯ (೫೦) ಎಂಬುವವರಿಗೆ ಕೆ ಸಿ ರೋಡು ಬಳಿ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಚಾಲಕ ಮತ್ತು ನಿರ್ವಾಹಕರು ಇತರ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿ ಬಸ್ಸನ್ನು ಎಲ್ಲಿಯೂ ನಿಲ್ಲಿಸದೇ ನೇರವಾಗಿ ಕೋಟೆಕಾರು ಖಾಸಗಿ ಆಸ್ಪತ್ರೆಗೆ ಭಾಗ್ಯರನ್ನು ಕರೆತಂದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಭಾಗ್ಯ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಯಾವಾಗಲೂ ಯಂಗ್ ಆಗಿ ಕಾಣ್ಬೇಕಾ!? ಹಾಗಿದ್ರೆ ಈ ಆಹಾರ ತಪ್ಪದೇ ಸೇವಿಸಿ!

ಯಾವಾಗಲೂ ಯಂಗ್ ಆಗಿ ಕಾಣ್ಬೇಕಾ!? ಹಾಗಿದ್ರೆ ಈ ಆಹಾರ ತಪ್ಪದೇ ಸೇವಿಸಿ! ಜನರು...

ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಹತ್ಯೆ!

ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್​ ಗರಂ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್​ ಗರಂ ಬೆಂಗಳೂರು,...

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ ಕೆಟ್ಟ ಕನಸುಗಳು...