ನಾಯಿಯೊಂದು ತನ್ನ ಮಾಲೀಕರ ಜೀವ ಉಳಿಸಲು ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡಿದೆ.
ಪೌಲಾ ಗೋಡ್ ವಿನ್ ರಿಟ್ರೀವರ್ ಎಂಬುವವರ ಸಾಕು ನಾಯಿ ಅವರನ್ನು ಕಾಪಾಡಿದೆ.
ಪೌಲ ಅವರು ತಮ್ಮ ಸಾಕು ನಾಯಿ ಟಾಡ್ ಜೊತೆ ಆರಿಜೋನಾದಲ್ಲಿ ಟ್ರೆಕ್ಕಿಂಗ್ ಹೋದಾಗ ಈ ಘಟನೆ ನಡೆದಿದೆ.
ಓನರ್ ಪ್ರಾಣ ಉಳಿಸಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ನಾಯಿ
ನಾಯಿಯೊಂದು ತನ್ನ ಓನರ್ ಪ್ರಾಣ ರಕ್ಷಣೆ ಮಾಡಲು ಹೋಗಿ ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡಿದೆ.
ಟ್ರೆಕ್ಕಿಂಗ್ ಹೋದಾಗ ಪೌಲಾ, rattle snake ಜಾತಿಯ ವಿಷಕಾರಿ ಹಾವಿನ ಮೇಲೆ ಇನ್ನೇನು ಕಾಲಿಡಬೇಕು ಎನ್ನುವಷ್ಟರಲ್ಲಿ ನಾಯಿ ಬಂದು ಅವರನ್ನ ಕಾಪಾಡಿದೆ. ಈ ಘಟನೆ ಬಗ್ಗೆ ಪೌಲಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಕಾಲಿನ ಮುಂದೆಯೇ ನಾಯಿ ಎಗರಿತು. ಇಲ್ಲವಾದ್ರೆ ಹಾವು ನನಗೆ ಕಚ್ಚಿಬಿಡುತ್ತಿತ್ತು ಎಂದು ಹೇಳಿದ್ದಾರೆ. ಆದ್ರೆ ದುರಾದೃಷ್ಟಕ್ಕೆ ಹಾವು ನಾಯಿಯನ್ನ ಕಚ್ಚಿದೆ.
ಪೌಲಾ ಕೂಡಲೇ ನಾಯಿಯನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ನೀಡಲಾಗಿದೆ. ಸದ್ಯ ಟಾಡ್ ಚೇತರಿಸಿಕೊಳ್ಳುತ್ತಿದೆ. ಹಾವಿನ ಕಡಿತದಿಂದ ನಾಯಿಯ ಮುಖ ಊದಿಕೊಂಡಿರುವ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡು, ನನ್ನ ಸ್ವೀಟ್ ಹೀರೋ ಬೇಗ ಗುಣಮುಗವಾಗಲಿ ಎಂದು ಹಾರೈಸಿ ಎಂದು ಪೌಲಾ ಬರೆದುಕೊಂಡಿದ್ದಾರೆ.