ಮುಂದಿನ 24 ಗಂಟೆಗಳಲ್ಲಿ ಈ ಭಾಗಗಳಲ್ಲಿ ಮಳೆಯಾಗಲಿದೆ

admin
1 Min Read

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬಿಡುವುಕೊಟ್ಟಿದ್ದು, ಒಣಹವೆ ಮುಂದುವರೆದಿದೆ.
ಮುಂಗಾರು ಆರಂಭವಾಗಿ ಒಂದು ವಾರ ರಾಜ್ಯಾದ್ಯಂತ ಭಾರಿ ಮಳೆಯಾಗಿತ್ತು, ಇದೀಗ ಕಳೆದ ಐದು ದಿನಗಳಿಂದ ಬಿಸಿಲು ಕಂಡುಬರುತ್ತಿದೆ.
ಮುಂದಿನ 24 ಗಂಟೆಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡಕವಿದ ವಾತಾರವಣವಿರಲಿದ್ದು, ಅಲ್ಲಲ್ಲಿ ಮಳೆಯಾಗಲಿದೆ, ಸಂಜೆಯವರೆಗೂ ಬಿಸಿಲಿರಲಿದ್ದು, ಬಳಿಕ ಮೋಡಕವಿದ ವಾತಾವರಣ ನಿರ್ಮಾಣವಾಗಲಿದೆ.


ಕೊಳ್ಳೇಗಾಲ, ಭಟ್ಕಳ, ಪುತ್ತೂರು, ಬೆಂಗಳೂರು ನಗರ, ಮಾಣಿ, ಮೂಡುಬಿದಿರೆ, ಸುಬ್ರಹ್ಮಣ್ಯ, ಕಾರ್ಕಳ, ಕೋಟ, ಹೊನ್ನಾವರ, ಆಗುಂಬೆ, ವಿರಾಜಪೇಟೆ, ಚನ್ನಗಿರಿಯಲ್ಲಿಮಳೆಯಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಮಾರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.

Share This Article
Leave a Comment