ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೆ ಏರುತ್ತಿದೆ. ಒಬ್ಬರು, ಇನ್ನೊಬ್ಬರನ್ನು ಟೀಕೆ ಮಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ. ಇಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಭಾರೀ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಪುಲ್ವಾಮಾ ದಾಳಿ ಬಗ್ಗೆ ತನಗೆ ಎರಡು ವರ್ಷದ ಮೊದಲೇ ತಿಳಿದಿತ್ತು ಎಂದು ಸಿಎಂ ಹೇಳಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಪ್ರಚಾರ ಮಾಡುವಾಗ ಈ ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.
ನನಗೆ ಎರಡು ವರ್ಷದ ಹಿಂದೆಯೇ ಪುಲ್ವಾಮಾ ದಾಳಿಯ ಬಗ್ಗೆ ಗೊತ್ತಿತ್ತು. ಲೋಕಸಭಾ ಚುನಾವಣೆ ಮುನ್ನ ಭಾರತ-ಪಾಕ್ ನಡುವೆ ಸಂಘರ್ಷ ನಡೆಯುತ್ತೆ. ಮೋದಿ ಏನಾದ್ರು ಕಥೆ ಸೃಷ್ಟಿ ಮಾಡಿ ಮತ ಕೇಳೋಕೆ ಬರ್ತಾರೆ ಎಂದು ನಿವೃತ ಸೈನಿಕ ಅಧಿಕಾರಿಯೊಬ್ಬರು ನನ್ನ ಬಳಿ ಚರ್ಚೆ ಮಾಡಿದ್ರು. ಇವತ್ತು ಅದೇ ರೀತಿಯಲ್ಲಿ ಆಗಿದೆ ಎಂದು ಸಿಎಂ ಹೇಳಿಕೊಂಡಿದ್ದಾರೆ.
ಪ್ರಧಾನಿಯ ಸುಳ್ಳು ಮಾತುಗಳನ್ನು ನಂಬ ಬೇಡಿ. ಕರ್ನಾಟಕದವರೇ 10 ತಿಂಗಳು ಪ್ರಧಾನಿ ಆಗಿ ಸೇವೆ ಸಲ್ಲಿಸಿದ್ರು. ಆ ವೇಳೆ ಈ ರೀತಿಯ ಬಾಂಬ್ ದಾಳಿ ಯಾವತ್ತಾದ್ರೂ ಆಗಿತ್ತೇ ಎಂದು ತಮ್ಮ ತಂದೆ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಗುಣಗಾನ ಮಾಡಿದರು.
ಮುಖ್ಯಮಂತ್ರಿಗಳಿಗೆ ಪುಲ್ವಾಮಾ ದಾಳಿ ಆಗುತ್ತೆ ಎಂದು 2 ವರ್ಷದ ಹಿಂದೆಯೇ ಗೊತ್ತಿತ್ತಂತೆ..!
Date: