ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಕ್ರಾಸ್ ಬಳಿ ಸಿಎಂ ಕುಮಾರಸ್ವಾಮಿ ಕಾರು ಸಾಗುತ್ತಿದ್ದಾಗ ಜನರು ಸುಮಲತಾ ಪರ ಜಯಘೋಷ ಕೂಗಿದ ಘಟನೆ ನಡೆದಿದೆ.ಸಿಎಂ ಕುಮಾರಸ್ವಾಮಿ ಇಂದು ಮೇಲುಕೋಟೆ ದೇವಸ್ಥಾನಕ್ಕೆ ಪೂಜೆಗೆ ಹೋಗುತ್ತಿದ್ದಾಗ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಕ್ರಾಸ್ ಬಳಿ ಕೆಲವರು ಸುಮಲತಾ ಪರ ಘೋಷಣೆ ಕೂಗಿದ್ದು ಸಿಎಂ ತೀವ್ರ ಮುಜುಗರ ತಂದಿತು.ಸಿಎಂ ಕಾರು ಜಕ್ಕನಹಳ್ಳಿ ಕ್ರಾಸ್ ಬಳಿ ಸಾಗುತ್ತಿದ್ದಂತೆ ಸುಮಲತಾ ಅಂಬರೀಶ್ ಪರ ಜನರು ಜಯಘೋಷ ಕೂಗಿದರು. ಇದರಿಂದ ಸ್ಥಳದಲ್ಲಿದ್ದ ಪೊಲೀಸರೇ ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದ ಸಿಎಂ ಕುಮಾರಸ್ವಾಮಿ ದೇವರಿಗೆ ವಿಶೇಷ ಪೂಜಾ ಮಹೋತ್ವವ ನೆರವೇರಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು ಪುತ್ರನ ಗೆಲುವಿಗಾಗಿ ಹಾಗೂ ನಾಡಿನ ಒಳಿತಿಗಾಗಿ ಪೂಜೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸುಮಲತಾ ರವರ ಕಾರ್ಯಕ್ರಮದ ಬಗ್ಗೆ ಯಾವುದೇ ಟೆನ್ಶನ್ ಇಲ್ಲ ನಾನು ಇಂತ ಜನರನ್ನು ಬಹಳಷ್ಟು ಸೇರಿಸಿದ್ದೇನೆ ಇದಕ್ಕಿಂತ 10 ರಿಂದ 20 ಪಟ್ಟು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದ್ದೇನೆ ಎಂದು ಕುಟುಕಿದರು ಅಲ್ಲದೆ ಯಾವುದೇ ನಟರ ಪ್ರಚಾರದ ಬಗ್ಗೆ ಮಾತನಾಡುವುದಿಲ್ಲ ,ಯಾರು ಯಾರ ಪರವಾಗಿ ಬೇಕಾದರೂ ಪ್ರಚಾರ ಮಾಡಲಿ ಹೀರೋ ಅಲ್ಲದೆ ವಿಲನ್ ಬೇಕಾದರೂ ಪ್ರಚಾರ ಮಾಡಲಿ ಎಲ್ಲರಿಗೂ ಪ್ರಚಾರ ಮಾಡುವ ಅಧಿಕಾರ ಮತ್ತು ಹಕ್ಕು ಇದೆ ಎಂದರು.
ನಿಖಿಲ್ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದಾರೆ 25 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತಾರೆ ಅಂದು ನಾನೂ ಜೊತೆಯಲ್ಲಿರುತ್ತೇನೆ ಎಂದು ಸಿಎಂ ತಿಳಿಸಿದರು.