ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅವರ ನಡುವೆ ಹೋರಾಟ ನಡೆಯುತ್ತಿದೆ.
ಸಿಎಂ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ನಾಯಕರೆಲ್ಲಾ ಸುಮಲತಾ ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಸುಮಲತಾ ಅವರು ಕೂಡ ಆಗಾಗ ಒಂದೊಂದು ಪಂಚ್ ಡೈಲಾಗ್ ಮೂಲಕ ಸಿಎಂ ಮತ್ತು ತಂಡದ ಬೆವರಿಳಿಸುತ್ತಿದ್ದಾರೆ.
ಇಂದು ಮಾಧ್ಯಮ ಸವಾದದಲ್ಲಿ ಸಿಎಂಗೆ ಟಾಂಗ್ ನೀಡಿದ್ದಾರೆ. ಮಂಡ್ಯ ಅಭಿವೃದ್ಧಿ ಮಾಡ್ತೀನಿ ಎಂದು ಹೇಳುವುದನ್ನು ನಾನು ಸಹ ಸ್ವಾಗತಿಸುತ್ತೇನೆ. ಆದರೆ, ಮಗನಿಗೆ ಮತಹಾಕಿ ಅಭಿವೃದ್ಧಿ ಮಾಡ್ತೀನಿ ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ
ಅಭಿವೃದ್ಧಿ ಮಾಡ್ತೀವಿ ಎಂದು ಹೇಳಿ. ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಎಂದರೇನು ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸುಮಲತಾ ಅದೆಂಥಾ ಟಾಂಗ್ ಕೊಟ್ರು ಅಂದ್ರೆ?
Date: