ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಮುನ್ನಡೆಸಲು ಇರುವ ಸಮಿತಿಯ ಸದಸ್ಯರೇ ‘ಅಕ್ರಮ’ ನಡೆಸಿ ವಂಚಿಸಿದ ಬಗ್ಗೆ ದೂರುಗಳು ದಾಖಲಾಗಿವೆ.
ಹೌದು_ ಒಂದೇ ಗಂಟೆಯಲ್ಲೇ ಮುಡಾದ 500 ರಿಂದ 600 ಫೈಲ್ ಕ್ಲಿಯರ್ ಆಗಿವೆ ಎಂದು ಆರ್ ಟಿಐ ಕಾರ್ಯಕರ್ತ ಗಂಗರಾಜು
ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಅವರು_ ಮುಡಾದಲ್ಲಿ ಒಂದು ಮೀಟಿಂಗ್ ಗೆ 600 ಫೈಲ್ ಗಳು ಬರುತ್ತದೆ. ಕೇವಲ ಒಂದೇ ಗಂಟೆಯಲ್ಲಿ ಎಲ್ಲಾ ಫೈಲ್ ಗಳು ಕ್ಲಿಯರ್ ಮಾಡುತ್ತಾರೆ.
ಒಂದು ಫೈಲ್ ಕ್ಲಿಯರ್ ಮಾಡಲು ಕನಿಷ್ಟ 15 ನಿಮಿಷ ಬೇಕು. ಮುಡಾದಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಅಲ್ಲದೆ
ಎಂಎಲ್ ಸಿ ಮಂಜೇಗೌಡ ಕೂಡಲೇ ರಾಜೀನಾಮೆ ಕೊಡಬೇಕು ಎಂದಿದ್ದಾರೆ.
ಈ ಮಧ್ಯೆ ಮುಡಾ 50: 50 ಸೈಟ್ ಹಂಚಿಕೆ ಆರೋಪ ಹಿನ್ನೆಲೆಯಲ್ಲಿ
ಮುಡಾ ಅಧ್ಯಕ್ಷ ಮರೀಗೌಡ ಹಾಗೂ ಶಾಸಕರು ಸುದ್ದಿಗೋಷ್ಠಿ ಕರೆದಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಕೆ ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಡಾ. ತಿಮ್ಮಯ್ಯ ಸೇರಿ ಹಲವರು ಭಾಗಿಯಾಗಲಿದ್ದಾರೆ.