ಮೂಲಸೌಕರ್ಯದಿಂದ ವಂಚನೆ: 8 ವರ್ಷದಿಂದ ರೇಷನ್ ಕಾರ್ಡ್ ಗಾಗಿ ಮಹಿಳೆ ಅಲೆದಾಟ!
ಧಾರವಾಡ:- ಮೂಲಸೌಕರ್ಯದಿಂದ ವಂಚಿತರಾದ ಮಹಿಳೆಯೋರ್ವಳು ಸುಮಾರು 8. ವರ್ಷಗಳಿಂದ ರೇಷನ್ ಕಾರ್ಡ್ ಪರದಾಡಿದ ಘಟನೆ ಜರುಗಿದೆ. ಜಿಲ್ಲೆಯ ಕಲಘಟಗಿ ಗ್ರಾಮದಲ್ಲಿ ಕಡು ಬಡವರಿಗೆ ಸುಮಾರು 8. ವರ್ಷಗಳಿಂದ ರೇಷನ್ ಕಾರ್ಡ್ ಸಿಗದೇ ಮುಸ್ಲಿಂ ಕುಟುಂಬ ಇಕ್ಕಟ್ಟಿಗೆ ಸಿಲುಕಿದೆ.
ಮುಸ್ಲಿಂ ಸಮುದಾಯದ ಫಾತಿಮಾ ಕಾಸಿಮಸಾಬ್ ಹುಬ್ಬಳ್ಳಿ ಎಂಬ ಮಹಿಳೆ ತಹಶಿಲ್ದಾರ ಅವರು ರೇಷನ್ ಕಾರ್ಡ್ ಗಾಗಿ ಅಲೆದಾಡುತ್ತಿದ್ದಾರೆ.
ಮೂರು ಮಕ್ಕಳು ಇರುವ ಈ ಮಹಿಳೆ ಮನೆ ಇಲ್ಲದೆ ಜೀವನ ನಡೆಸುತ್ತಿದ್ದಾರೆ.
ರೈತ ಮುಖಂಡರಾದ ಜಿಯಾವುಲ್ಲಾ ವಂಟಮೂರಿ ಅವರಿಗೆ ನೋಂದ ಮಹಿಳೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ .
ಶಿಘ್ರವೆ ನಮಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.