ಮೂಸಂಬಿ ಜ್ಯೂಸ್ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ..?
ಯಾವುದೇ ಋತುವಿನಲ್ಲೂ ಲಭ್ಯವಿರುವ ಮೂಸಂಬಿ ಹಣ್ಣು ಆರೋಗ್ಯಕ್ಕೆ ನಾನಾ ರೀತಿಯಲ್ಲಿ ಲಾಭಕಾರಿಯಾಗಿದೆ. ವಿಶೇಷವಾಗಿ ಮಳೆಗಾಲದಂತೆಯೇ ಸೋಂಕುಗಳು ಹೆಚ್ಚಾಗುವ ಸಮಯದಲ್ಲಿ ಇದರ ಸೇವನೆ ದೇಹವನ್ನು ರೋಗ ನಿರೋಧಕ ಶಕ್ತಿಯಿಂದ ತುಂಬಿ ತುಳಿಯಲು ಸಹಕಾರಿಯಾಗುತ್ತದೆ. ವೈದ್ಯಕೀಯ ತಜ್ಞರು ದಿನವಿಡಿ ಆರೋಗ್ಯ ಕಾಪಾಡಿಕೊಳ್ಳಲು ಬೆಳಗ್ಗೆ ವೇಳೆಯಲ್ಲಿ ಮೂಸಂಬಿ ರಸವನ್ನು ಸೇವನೆ ಮಾಡುವುದನ್ನು ಶಿಫಾರಸು ಮಾಡುತ್ತಾರೆ.
ಮೂಸಂಬಿಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ರಂಜಕಗಳನ್ನೊಳಗೊಂಡ ಪೋಷಕಾಂಶಗಳು ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರ ಸೇವನೆಯು ಅಜೀರ್ಣ, ಮಲಬದ್ಧತೆ, ಮತ್ತು ಜಠರ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.
ಮೂಸಂಬಿ ರಸದ ಪ್ರಮುಖ ಲಾಭಗಳು:
• ಅಜೀರ್ಣ ನಿವಾರಣೆ: ಈ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮಗೊಳ್ಳುತ್ತದೆ ಮತ್ತು ಕರುಳಿನ ಚಲನೆ ಸುಧಾರಿಸುತ್ತದೆ.
• ರಕ್ತದೊತ್ತಡ ನಿಯಂತ್ರಣ: ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯಕವಾಗಿದ್ದು, ಹೃದಯ ಸಂಬಂಧಿತ ಸಮಸ್ಯೆಗಳನ್ನು ದೂರವಿಡುತ್ತದೆ.
• ಚರ್ಮದ ಆರೋಗ್ಯ: ವಿಟಮಿನ್ ಸಿ ಹಾಗೂ ಉತ್ಕರ್ಷಣ ನಿರೋಧಕಗಳು ಚರ್ಮದ ಹಾನಿಯನ್ನು ತಡೆಯುತ್ತವೆ. ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಚರ್ಮ ತಾಜಾ ಕಾಣುತ್ತದೆ.
• ಕಣ್ಣುಗಳ ಆರೋಗ್ಯ: ಮೂಸಂಬಿಯಲ್ಲಿರುವ ಶಿಲೀಂಧ್ರ ವಿರೋಧಿ ಗುಣಗಳು ದೃಷ್ಟಿಶಕ್ತಿಗೆ ಸಹಕಾರಿಯಾಗುತ್ತವೆ.
• ಸಂಧಿವಾತದ ಸಮಸ್ಯೆಗೆ ಪರಿಹಾರ: ಉರಿಯೂತ ನಿವಾರಕ ಗುಣಗಳು ಅಸ್ಥಿಸಂಧಿವಾತ, ರುಮಟಾಯ್ಡ್ ನೋವಿಗೆ ಕಡಿತ ತರುತ್ತವೆ.
• ವಿಷ ನಿವಾರಣೆ: ದೇಹದಿಂದ ವಿಷಪದಾರ್ಥಗಳನ್ನು ಹೊರ ಹಾಕಲು ಮೂಸಂಬಿ ಸಹಾಯ ಮಾಡುತ್ತದೆ.