ಮೈತ್ರಿಯಿಂದ ಕಾಂಗ್ರೆಸ್ ಗೆ ಶಾಕ್ ಮೇಲೆ ಶಾಕ್..! ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾದ ಪ್ರಭಾವಿ ನಾಯಕ..!

Date:

ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇಡೀ ದೇಶದಲ್ಲಿ ಚುನಾವಣಾ ಕಾವು ಹೆಚ್ಚಾಗ ತೊಡಗಿದೆ ಅದರಲ್ಲು ಕರ್ನಾಟಕದ ಮಟ್ಟಿಗೆ ಈ ಕಾವೂ ಇನ್ನೂ ಜೋರಾಗಿದೆ ಎಂದು ಹೇಳಬಹುದು. ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದ ಹಲವರು ಖುಷಿಯಾಗಿದ್ದರೆ ಇನ್ನು ಹಲವರು ಈ ಮೈತ್ರಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಈ ಮನಸ್ತಾಪಕ್ಕೆ ಇದೀಗ ಮತ್ತೊಂದು ತಾಜಾ ಉದಾಹರಣೆ ಸಿಕಿದ್ದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಎ.ಮಂಜು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವ ಎಲ್ಲಾ ಲಕ್‍ಣಗಳು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತಾಗಿ ಮಾತನಾಡಿರುವ ಎ ಮಂಜು ಶುಕ್ರವಾರ ಹಾಸನದ ಅರಸೀಕೆರೆ ಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಎ.ಮಂಜು ಅವರು ಘೋಷಣೆಯನ್ನ ಮಾಡಿದ್ದಾರೆ. ಅಲ್ಲದೆ ಮಂಜು ಅವರ ಜೊತೆಗೆ ಅವರ ಬೆಂಬಲಿಗರಾದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಬಿಜೆಪಿ ಸೇರುವ ಸಾಧ್ಯತೆ ಇದೆ. ಮಂಜು ಜೊತೆಗೆ ಕಾಂಗ್ರೆಸ್‍ನ ಬಹುತೇಕ ಜನಪ್ರತಿನಿಧಿಗಳು, ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರೂ ಸಹ ಕಾಂಗ್ರೆಸ್ ಬಿಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಸನದಲ್ಲಿ ದೇವೇಗೌಡರು ಸ್ಪರ್ಧೆ ಮಾಡಿದರೆ ಒಪ್ಪಿಗೆ ಇದೆ, ಆದ್ರೆ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಮೊದಲೇ ತಿಳಿಸಿದ್ದರು, ಆದ್ರೆ ಮೊನ್ನೆ ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ಎಂದು ಘೋಷಣೆಯಾದ ಬಳಿಕ ಎ ಮಂಜು ನಿರ್ಧಾರ ತೆಗೆದುಕೊಂಡಿದ್ದು ಇದು ಕಾಂಗ್ರೆಸ್ ಗೆ ಬಿಗ್ ಶಾಕ್ ನೀಡಿದಂತಾಗಿದೆ.

 

 

Share post:

Subscribe

spot_imgspot_img

Popular

More like this
Related

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ

ಬೆಳೆ ವಿಮೆ ಯೋಜನೆ ಯಶಸ್ಸು: ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಬೆಂಗಳೂರು: ಪ್ರಧಾನಮಂತ್ರಿ...

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ ರೆಡ್ಡಿ ಆರೋಪ

ಸಿಬಿಐ ತನಿಖೆ ವಿಚಾರ: ಬಳ್ಳಾರಿ ಪ್ರಕರಣದಲ್ಲಿ ದ್ವಂದ್ವ ನೀತಿ – ಜನಾರ್ಧನ...

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು!

ಉಗುರು ಕಚ್ಚುವ ಅಭ್ಯಾಸ ಇರುವವರು ಈ ವಿಷಯಗಳ ಬಗ್ಗೆ ತಿಳಿದಿರಬೇಕು! ಉಗುರು ಕಚ್ಚುವುದು...

ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಕಳಪೆ: ಬೆಂಗಳೂರು, ಮಂಗಳೂರು ನಗರವಾಸಿಗಳಿಗೆ ಆತಂಕ

ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಕಳಪೆ: ಬೆಂಗಳೂರು, ಮಂಗಳೂರು ನಗರವಾಸಿಗಳಿಗೆ ಆತಂಕ ಬೆಂಗಳೂರು: ಕಳೆದ...