ಮೈಸೂರು: ಇಬ್ಬರ ಹೆಂಡತಿಯರ ಮುದ್ದಿನ ಗಂಡನ ಮೋಸದ ಬಯಲು
ಮೈಸೂರು ನಗರದ ಜೆಪಿ ನಗರದಲ್ಲಿ ಆಟೋ ಡ್ರೈವರ್ ಶಿವಕುಮಾರ್ ವಿರುದ್ಧ ಇಬ್ಬರನ್ನ ಮದುವೆಯಾಗಿರುವ ಆರೋಪ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ, ಶಿವಕುಮಾರ್ 2020ರಲ್ಲಿ ನಂಜನಗೂಡು ತಾಲೂಕಿನ ಲಾವಣ್ಯ ಎಂಬ ಯುವತಿಯನ್ನು ಮದುವೆಯಾಗಿದ್ದರು. ಒಂದು ವರ್ಷ ಸಂಸಾರ ನಡೆಸಿದ ನಂತರ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದಿದ್ದರು. ನಂತರ 2022ರಲ್ಲಿ ಹಾಸನ ಜಿಲ್ಲೆಯ ಚನ್ನರಾಯನಪಟ್ಟಣದ ಶೋಭಾಳೊಂದಿಗೆ ಮನೆಯವರ ಒಪ್ಪಿಗೆಯಂತೆ ಅರೇಂಜ್ ಮ್ಯಾರೇಜ್ ಮಾಡಿಕೊಂಡಿದ್ದರು.
ಆದರೆ ನಂತರ ಮತ್ತೆ ಮೊದಲ ಪತ್ನಿ ಲಾವಣ್ಯಳೊಂದಿಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು, ಆಕೆಯನ್ನು ಮೈಸೂರಿನ ಸ್ವಂತ ಮನೆಯಲ್ಲಿ ಇರಿಸಿಕೊಂಡಿರುವುದು ಬಯಲಾಗಿದೆ. ಈ ವಿಷಯ ತಿಳಿದ ಶೋಭಾಳಿಗೆ ಪತಿ ಹಿಂಸೆ ನೀಡಿದ್ದಾನೆಂಬ ಆರೋಪ ಕೇಳಿಬಂದಿದೆ. “ಇಷ್ಟವಿದ್ದರೆ ಇರು, ಇಲ್ಲದಿದ್ದರೆ ಮನೆ ಬಿಟ್ಟು ಹೋಗು” ಎಂದು ಹೇಳಿ ಕಿರುಕುಳ ನೀಡಿದ್ದಾನೆಂದು ಶೋಭಾ ದೂರಿದ್ದಾರೆ.
ಶೋಭಾಳಿಗೆ ಇಬ್ಬರಿಗೂ ಮಗುಗಳಿದ್ದು, ಶೋಭಾಳಿಗೆ 2 ವರ್ಷದ ಗಂಡು ಮಗು, ಲಾವಣ್ಯಳಿಗೆ ಒಂದು ಹೆಣ್ಣು ಮಗು ಇದೆ. ಇದೇ ವೇಳೆ, ಲಾವಣ್ಯ ಡಿವೋರ್ಸ್ ಆದ ನಂತರ ಕೇರಳದ ಪ್ರಸೂನ್ ಎಂಬವನನ್ನು ಮದುವೆಯಾಗಿದ್ದಾಳೆ ಎಂಬ ಆರೋಪವನ್ನೂ ಶೋಭಾ ಮಾಡಿದ್ದಾರೆ.
ಕಳೆದ ಮೂರು ತಿಂಗಳಿಂದ ಇಬ್ಬರು ಹೆಂಡತಿಯರೂ ಒಟ್ಟಿಗೇ ಇರಬೇಕೆಂದು ಒತ್ತಾಯಿಸುತ್ತಿದ್ದ ಪತಿ, ಹಿಂಸೆ ನೀಡುತ್ತಿರುವುದಾಗಿ ಶೋಭಾ ದೂರಿದ್ದು, ನ್ಯಾಯಕ್ಕಾಗಿ ಕಣ್ಣೀರಿಟ್ಟು ಪೊಲೀಸರ ಮೊರೆ ಹೋಗಿದ್ದಾರೆ.