‘ಮೊಸಳೆಗಳು ಮುಗ್ಧವಾಗಿರುತ್ತವೆ ‘ : ಮೋದಿಗೆ ರಾಹುಲ್ ಲೇವಡಿ

Date:

ಉತ್ತರ ಪ್ರದೇಶದ ವಾರಾಣಸಿಯ ಆರೋಗ್ಯ ಕಾರ್ಯಕರ್ತರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಣ್ಣೀರಿಟ್ಟ ಘಟನೆಯನ್ನು ಕಾಂಗ್ರೆಸ್ ಟೀಕಿಸಿದೆ. ಇದು ‘ಮೊಸಳೆ ಕಣ್ಣೀರು’ ಎಂದು ಅದು ಲೇವಡಿ ಮಾಡಿದೆ.

 

ಕೋವಿಡ್ ನಿರ್ವಹಣೆ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಲಸಿಕೆಗಳು ಇಲ್ಲ. ಪಾತಾಳದಲ್ಲಿನ ಜಿಡಿಪಿ. ಅಧಿಕ ಕೋವಿಡ್ ಸಾವುಗಳು… ಭಾರತ ಸರ್ಕಾರದ ಪ್ರತಿಕ್ರಿಯೆ? ಪ್ರಧಾನಿ ಅಳುತ್ತಾರೆ’ ಎಂದು ರಾಹುಲ್ ಗಾಂಧಿ ಏಷ್ಯಾದ ದೇಶಗಳಲ್ಲಿನ ಕೋವಿಡ್ ಸಾವಿನ ಪ್ರಮಾಣ ಹಾಗೂ ಜಿಡಿಪಿ ದರಗಳ ಪಟ್ಟಿಯನ್ನು ನೀಡಿದ್ದಾರೆ. ಇದರಲ್ಲಿ ಎರಡರಲ್ಲಿಯೂ ಭಾರತ ಕೆಟ್ಟ ಸ್ಥಿತಿಯಲ್ಲಿ ಇರುವುದನ್ನು ನಮೂದಿಸಿದ್ದಾರೆ.

ಮೋದಿ ಆಡಳಿತದ ತಪ್ಪು ನಿರ್ಧಾರಗಳಿಂದಾಗಿ, ಕೊರೊನಾದ ಜತೆಗೆ ಕಪ್ಪು ಶಿಲೀಂದ್ರದ ಪಿಡುಗು ಕೂಡ ಆವರಿಸಿದೆ. ಲಸಿಕೆಯ ಕೊರತೆ ಇರುವುದು ಮಾತ್ರವಲ್ಲ, ಈ ಹೊಸ ಸಾಂಕ್ರಾಮಿಕದ ಔಷಧಕ್ಕೂ ಭಾರಿ ಅಭಾವ ಇದೆ. ಇದರೊಂದಿಗೆ ಹೊಂದಿಕೊಳ್ಳಲು ಪ್ರಧಾನಿ ಚಪ್ಪಾಳೆ ತಟ್ಟುವುದನ್ನು ಶೀಘ್ರದಲ್ಲಿಯೇ ಘೋಷಿಸಲಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ರಾಹುಲ್ ಗಾಂಧಿ, “ಮೊಸಳೆಗಳು ಮುಗ್ಧವಾಗಿರುತ್ತವೆ’ ಎಂದು ಮೋದಿ ಅವರು ಭಾವುಕರಾದದ್ದು ‘ಮೊಸಳೆ ಕಣ್ಣೀರು’ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಕೂಡ ಟ್ವಿಟ್ಟರ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ಜನವರಿ 2021ರ ಪ್ರತಿಪಾದನೆ- ಜುಲೈ ಅಂತ್ಯದ ವೇಳೆಗೆ ಭಾರತದ 30 ಕೋಟಿ ಜನತೆಗೆ ಮೋದಿ ಸರ್ಕಾರ ಲಸಿಕೆ ನೀಡಲಿದೆ .‌ನಮಗೆ ಬೇೇೇಕಿಕ ಲಸಿಿಿಿಕೆಬಕೆಕ ವಿನಃ ಕಣ್್ಣ್್ಣೀ ರಲ್ಲ ಎಂಂಂಂಂಂಂಂಂದಿದ್ದಾರೆದಿದ್ದಾರದಿದ್ದಾದಿದ್ದದಿದ್ದಿದದಿದ

 

ರಾಜ್ಯಗಳಲ್ಲಿ 1.6 ಕೋಟಿ ಡೋಸ್‌ಗಳಷ್ಟು ಲಸಿಕೆ ಲಭ್ಯವಿದೆ ಎಂದು ಕೇಂದ್ರ ಹೇಳಿದೆ. ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಲಸಿಕೆ ಕೊರತೆಯಿಂದ ಈಗಾಗಲೇ 18-44 ವಯೋಮಿತಿಯವರಿಗೆ ಲಸಿಕೆ ನೀಡುವುದನ್ನು ನಿಲ್ಲಿಸಿದೆ. ಲಸಿಕೆ ಅಭಾವದಿಂದ ದೈನಂದಿನ ಲಸಿಕೆ ಕಾರ್ಯ ಇಳಿಕೆಯಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವ ಹಾಗೂ ದೆಹಲಿ ಮುಖ್ಯಮಂತ್ರಿ ನಿವಾಸದ ನಡುವಿನ ಅಂತರವೆಷ್ಟು? ಅವರಿಬ್ಬರು ಏಕೆ ಪರಸ್ಪರ ಭೇಟಿ ಮಾಡಲಾರರು? ನಿಧಾನಗತಿಯ ಲಸಿಕೆ ಅಭಿಯಾನದ ಪರಿಣಾಮದ ಬಗ್ಗೆ ಐಎಂಎಫ್ ಮತ್ತು ಡಬ್ಲ್ಯೂಎಚ್‌ಒ ಈಗಾಗಲೇ ಭಾರತಕ್ಕೆ ಎಚ್ಚರಿಕೆ ನೀಡಿವೆ. ಲಸಿಕೆ ಕಾರ್ಯಕ್ರಮ ವೇಗವಾಗದಿದ್ದರೆ, ಮೂರನೇ ಅಲೆಯನ್ನು ತಡೆಯುವುದು ಸಾಧ್ಯವಿಲ್ಲ’ ಎಂದು ಪಿ. ಚಿದಂಬರಂ ಎಚ್ಚರಿಕೆ ನೀಡಿದ್ದಾರೆ.

 

 

 

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...