ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೊಲೆಗೆ ದೋಸ್ತಿ ಸಂಚು ರೂಪಿಸಿದೆಯಂತೆ..!
ಇಂಥಾ ಗಂಭೀರ ಆರೋಪ ಮಾಡಿರುವುದು ಬಿಜೆಪಿ.
ಪ್ರಧಾನಿಯನ್ನು ಕಲ್ಲಲ್ಲಿ ಹೊಡೆಯಿರಿ ಎಂದು ಜೆಡಿಎಸ್ ಶಾಸಕರು ಹೇಳುತ್ತಾರೆ. ಗೂಂಡಾ ಶಾಸಕ ಶಿವಲಿಂಗೇಗೌಡರ ಹೇಳಿಕೆ ಮೋದಿಕೊಲೆಯನ್ನು ಪ್ರಚೋದಿಸುವಂತಿದೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ವಾಧಿಕಾರ ಇದೆ. ಮೋದಿ ಕೊಲೆಗೆ ಸಂಚು ಮಾಡಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಮೋದಿ ಮೋದಿ ಎನ್ನುವವರಿಗೆ ಕಲ್ಲಿಂದ ಹೊಡೆಯಿರಿ ಎಂದು ಶಿವಲಿಂಗೇಗೌಡ ಹೇಳಿದ್ದರು. ಈ ಹೇಳಿಕೆಯನ್ನು ಬಳಸಿಕೊಂಡ ಬಿಜೆಪಿ ಮೋದಿ ಯನ್ನೇ ಕೊಲ್ಲಲು ದೋಸ್ತಿ ಸಂಚು ಮಾಡಿದೆ ಎಂದು ಗಂಭೀರ ಆರೋಪ ಮಾಡಿದೆ.
Goonda JDS MLA K M Shivalingegowda urge his goons to pelt stones at PM @narendramodi when he visits Karnataka.
Coalition partners are openly issuing threat to kill PM.
Clear attempt to wipe out democracy & install dictatorship is made under @hd_kumaraswamy’s rule.
— BJP Karnataka (@BJP4Karnataka) March 24, 2019