BSF ಯೋಧರಿಗೆ ಸರಿಯಾದ ಸೌವಲತ್ತುಗಳಿಲ್ಲ. ಅಲ್ಲಿ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ಸೆಲ್ಫೀ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನುಂಟು ಮಾಡಿದ್ದ ಯೋಧ ತೇಜ್ ಬಹದ್ದೂರ್ ಯಾದವ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ
ರೇವಡಿಯ ನಿವಾಸಿಯಾದ ತೇಜ್ ಪ್ರತಾಪ್ ಸುದ್ದಿಗೋಷ್ಟಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಮೋದಿ ವಿರುದ್ಧ ಸ್ಪರ್ಧಿಸಿ ಸೇನೆಯಲ್ಲಾಗುತ್ತಿರುವ ಭ್ರಷ್ಟಾಚಾರವನ್ನು ತಡೆಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.
BSFನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎನ್ನುವ ವಿಚಾರವನ್ನು ವಿಡಿಯೋ ಮೂಲಕ ಹೇಳಿದ್ದ ತೇಜ್ ಬಹದ್ದೂರ್ ಯಾದವ್ ರನ್ನು ಅಮಾನತ್ತು ಮಾಡಲಾಗಿತ್ತು.
ಈಗ ಅವರು ಪ್ರಧಾನಿ ಮೋದಿ ತವರು ಕ್ಷೇತ್ರ ವಾರಾಣಸಿಯಲ್ಲಿ ಚುನಾವಣಾ ಕಣಕ್ಕಿಳಿದು ಭ್ರಷ್ಟಾಚಾರದ ವಿರುದ್ಧ ಹೋರಾಡ್ತೀನಿ ಎಂದಿದ್ದಾರೆ.
ತಮ್ಮ ಸ್ಪರ್ಧೆಯ ಬಗ್ಗೆ ಅವರು ಟ್ವಿಟರ್ ನಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ.
‘ಜೈ ಹಿಂದ್, ಪಕ್ಷೇತರನಾಗಿ ಬನಾರಸ್ ನಿಂದ ಮೋದಿ ವಿರುದ್ಧ ಸ್ಪರ್ಧಿಸಬಹುದಲ್ವಾ? ಯಾವುದೇ ಪಕ್ಷದ ಗುಲಾಮನಾಗಲು ಬಯಸುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
.