ಬಾಂಗ್ಲಾದೇಶದ ಟೆಸ್ಟ್ ಮತ್ತು ಟಿಟ್ವೆಂಟಿ ತಂಡದ ನಾಯಕ ಶಕಿಬ್ ಅಲ್ ಹಸನ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದ್ದು ಎರಡು ವರ್ಷಗಳ ನಿಷೇಧವನ್ನು ಅನುಭವಿಸುವಂತಹ ಪರಿಸ್ಥಿತಿ ಎದುರಾಗಿದೆ. ಶಕಿಬ್ ಅಲ್ ಹಸನ್ ಅವರಿಗೆ ಬುಕ್ಕಿಗಳ ಜೊತೆ ಸಂಪರ್ಕ ಇದ್ದರೂ ಸಹ ಇದನ್ನು ಕ್ರಿಕೆಟ್ ಮಂಡಳಿಗೆ ತಿಳಿಸದೆ ಮುಚ್ಚಿಟ್ಟಿದ್ದಾರೆ.
ಅಲ್ಲದೆ ಶಕಿಬ್ ಅಲ್ ಹಸನ್ ಅವರು ಹಲವಾರು ಫಿಕ್ಸಿಂಗ್ ಪ್ರಕ್ರಿಯೆಯಲ್ಲಿ ತೊಡಗಿರುವ ವಿಷಯ ಒಂದೊಂದೇ ಹೊರಬರುತ್ತಿದ್ದು ಎರಡು ವರ್ಷ ನಿಷೇಧ ಮಾಡಲಾಗಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಭಾರತದ ಜೊತೆಗಿನ ಸರಣಿಗೆ ಉತ್ಸಾಹ ಶಕಿಬ್ ಅಲ್ ಹಸನ್ ಅವರು ಅಲಭ್ಯರಾಗಲಿದ್ದು ಸರಣಿಯಿಂದ ಹೊರ ಉಳಿಯಲಿದ್ದಾರೆ.