ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಟಿಕೆಟ್ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಈ ಮಧ್ಯೆ ಕುಟುಂಬ ರಾಜಕಾರಣದ ಬಗ್ಗೆ ಭಾರೀ ಚರ್ಚೆಗಳಾಗುತ್ತಿವೆ. ಅದರಲ್ಲೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮತ್ತು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆ ಟಿಕೆಟ್ ನೀಡೋದು ಪಕ್ಕಾ ಆದ ಬಳಿಕ ಇದೀಗ ಎಲ್ಲೆ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು. ದೇವೇಗೌಡರು ಟೀಂ ಇಂಡಿಯಾ ಕಟ್ಟುತ್ತಿದ್ದರೆ ಅವರ ಇಡೀ ಕುಟುಂಬ ಟೀಂ ಇಂಡಿಯಾದಲ್ಲಿರುತ್ತಿತ್ತು ಎಂದು ಹೇಳುವಂತಹ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದಕ್ಕೆ ಎಲ್ಲೆಡೆಯಿಂದ ಬಾರಿ ಪ್ರತಿಕ್ರಿಯೆಗಳು ಎದುರಾಗುತ್ತಿದೆ.
ಫೋಟೋದಲ್ಲಿ ಟೀಂ ಇಂಡಿಯಾ ಆಟಗಾರರ ಫೋಟೋಗೆ ದೇವೇಗೌಡರ ಕುಟುಂಬದವರ ಫೋಟೋ ಎಡಿಟ್ ಮಾಡಿ `ದೇವೇಗೌಡರ ಕ್ರಿಕೆಟ್ ಟೀಂ’ ಎಂದು ಬರೆಯಲಾಗಿದೆ. ಇದೀಗ ಈ ಎಡಿಟೆಡ್ ಫೋಟೋ ವೈರಲ್ ಆಗುತ್ತಿದೆ. ದೊಡ್ಡಗೌಡ್ರು ಇಂಡಿಯಾ ಟೀಂ ನ ನಾಯಕರಾದ್ರೆ, ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖಿಲ್, ಪ್ರಜ್ವಲ್, ಸೇರಿ ಎಲ್ಲರೂ ಪ್ಲೇಯರ್ಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿದೆ.
ಜೆಡಿಎಸ್ ನಲ್ಲಿ ಯಾವ ಕಾರ್ಯಕರ್ತರಿಗೂ `ಟಿಕೆಟ್’ ಕೊಡಲ್ಲ. ಪಕ್ಷಕ್ಕಾಗಿ ದುಡಿದು ದುಡಿದು ಅವರೇ `ಟಿಕೆಟ್’ ತಗೋಬೇಕು ಎಂದು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಶೇಷ ಏನೆಂದರೆ ಜೆಡಿಎಸ್ ಕಾರ್ಯಕರ್ತರೇ ಈ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಹೊತ್ತಿಗೆ ಈ ದೊಂಬರಾಟ ಯಾವ ಮಟ್ಟಕ್ಕೆ ಬಂದು ಮುಟ್ಟುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ