ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹೀರೋ ಎಂದು ಕರೆದರು.
ಬೆಂಗಳೂರಿನಲ್ಲಿ ಮಂಡ್ಯದ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆಯಲ್ಲಿ ದರ್ಶನ್ ಮತ್ತು ಯಶ್ ಇಬ್ಬರೂ ಭಾಗಿಯಾಗಿದ್ದರು.
ಸುದೀಪ್ ಹೇಳಿದ್ದಾರೆ ಸುಮಲತಾ ಪರ ಪ್ರಚಾರಕ್ಕೆ ದರ್ಶನ್ ಇರುವಾಗ ನಾನು ಏಕೆ ಎಂದು ಹೇಳಿದ್ದಾರೆ. ನೀವೊಬ್ಬರೇ ಸಾಕ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದರ್ಶನ್ ನಾನೊಬ್ಬನೇ ಎಲ್ಲಿ ಹೀರೋ ಇದ್ದಾರೆ ಎಂದು ಯಶ್ ಅವರನ್ನು ತೋರಿಸಿದರು. ನಾವಿಬ್ಬರು ಜೋಡಿ ಎತ್ತುಗಳಾಗಿ ಸುಮಲತಾ ಅವರಿಗೆ ಸಾರಥಿಗಳಾಗುವ ಭರವಸೆ ನೀಡಿದರು.
ಅಂಬರೀಶ್ ಅವರು ಇರುವಾಗಲೂ ಚುನಾವಣೆಯಲ್ಲಿ ಅವರು ಹೇಳಿದಂತೆ ಕೆಲಸ ಮಾಡುತ್ತಿದ್ದೆ. ಈಗಲೂ ಸುಮಲತಾ ಅವರ ಜೊತೆ ಇರುತ್ತೇನೆ. ಮನೆಯಲ್ಲಿ ತಾಯಿ ತೆಗೆದುಕೊಂಡ ನಿರ್ಧಾರದ ಜೊತೆ ಇರುವಂತೆ ಸುಮಲತಾ ಅವರಿಗೆ ಬೆಂಬಲ ನೀಡುವುದು ಕರ್ತವ್ಯ ಎಂದರು.
ಯಶ್ ಅವರನ್ನು ಹೀರೋ ಅಂದ ಚಾಲೆಂಜಿಂಗ್ ಸ್ಟಾರ್.!
Date: