ಯಾವಾಗಲೂ ಯಂಗ್ ಆಗಿ ಕಾಣ್ಬೇಕಾ!? ಹಾಗಿದ್ರೆ ಈ ಆಹಾರ ತಪ್ಪದೇ ಸೇವಿಸಿ!

Date:

ಯಾವಾಗಲೂ ಯಂಗ್ ಆಗಿ ಕಾಣ್ಬೇಕಾ!? ಹಾಗಿದ್ರೆ ಈ ಆಹಾರ ತಪ್ಪದೇ ಸೇವಿಸಿ!

ಜನರು ಇಂದು ಆರೋಗ್ಯಕ್ಕಿಂತ ಹೆಚ್ಚಾಗಿ ಯಂಗ್ ಆಗಿ ಕಾಣಲು ಪ್ರಯತ್ನಿಸುತ್ತಿದ್ದಾರೆ. ವಯಸ್ಸಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲದಿದ್ದರೂ, ಈ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಆಹಾರವೇ ಒಂದು ಶ್ರೇಷ್ಠ ಆಯ್ಕೆ ಎಂದು ತಜ್ಞರು ಹೇಳಿದ್ದಾರೆ.

ಮುಖಕ್ಕೆ ಆಂಟಿ ಏಜಿಂಗ್ ಕ್ರೀಂಗಳು, ಮಾಸ್ಕ್‌ಗಳು ಮತ್ತು ಸೀರಮ್‌ಗಳನ್ನು ಹಚ್ಚುವುದು ಪರಿಹಾರ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇವು ಚರ್ಮಕ್ಕೆ ತಾತ್ಕಾಲಿಕ ಫಲಿತಾಂಶ ನೀಡಿದರೂ, ದೀರ್ಘಾವಧಿಯಲ್ಲಿ ಹಾನಿಕಾರಕವಾಗಬಹುದು ಎಂಬುದನ್ನು ತಜ್ಞರು ಎಚ್ಚರಿಸುತ್ತಾರೆ.

ಹಣ್ಣುಗಳು ಹಾಗೂ ತರಕಾರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇವು ಚರ್ಮದ ಜೀವಕೋಶಗಳನ್ನು ಆರೋಗ್ಯವಾಗಿಡುವ ಮೂಲಕ ನೈಸರ್ಗಿಕವಾಗಿ ಹೊಳಪು ನೀಡುತ್ತವೆ. ಸಸ್ಯ ಆಹಾರದಲ್ಲಿ ಪಾಲಿಫಿನಾಲ್ಸ್ ಮತ್ತು ಆ್ಯಂಟಿಆಕ್ಸಿಡೆಂಟ್ಸ್‌ಗಳು ಹೆಚ್ಚಾಗಿ ಇರುವುದರಿಂದ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಕಾರಿ.

ಎಲೆಕೋಸು

ಎಲೆಕೋಸಿನಲ್ಲಿ ಇಂಡೋಲ್-3-ಕಾರ್ಬಿನಾಲ್ ಎಂಬ ಅಂಶವಿದ್ದು, ಇದು ಈಸ್ಟ್ರೊಜೆನ್ ಹಾರ್ಮೋನ್ ಸಮತೋಲನದಲ್ಲಿಡುತ್ತದೆ. ಜೊತೆಗೆ ವಿಟಮಿನ್ A ಮತ್ತು D ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿ ಕೋಶ ಹಾನಿಯನ್ನು ತಡೆಗಟ್ಟುತ್ತವೆ.

ಕ್ಯಾರೆಟ್

ಕ್ಯಾರೆಟ್‌ನಲ್ಲಿ ಇರುವ ಬೀಟಾ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ A ಆಗಿ ಪರಿವರ್ತಿತವಾಗುತ್ತದೆ. ಇದು ಚರ್ಮದ ಹೊಳಪು ಹೆಚ್ಚಿಸಲು, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ದ್ರಾಕ್ಷಿ

ದ್ರಾಕ್ಷಿಯಲ್ಲಿ ಇರುವ ರೆಸ್ವೆರಾಟ್ರಾಲ್ ಉರಿಯೂತವನ್ನು ತಡೆಯುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡುತ್ತವೆ.

ಈರುಳ್ಳಿ

ಈರುಳ್ಳಿಯಲ್ಲಿ ಇರುವ ಕ್ವೆರ್ಸೆಟಿನ್ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿಯುಳ್ಳ ಅಂಶ. ಇದು ರಕ್ತವನ್ನು ತೆಳುವಾಗಿಸಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಚರ್ಮದ ಆರೋಗ್ಯಕ್ಕೂ ಇದು ಸಹಾಯಕ.

ಟೊಮೆಟೊ

ಟೊಮೆಟೊದಲ್ಲಿ ಇರುವ ಲೈಕೋಪೀನ್ ಮೆದುಳಿನ ಆರೋಗ್ಯ ಕಾಪಾಡುವ ಅಂಶವಾಗಿದ್ದು, ಚರ್ಮದಲ್ಲಿ ನೆರಿಗೆ ಮೂಡುವುದನ್ನು ಕಡಿಮೆ ಮಾಡುತ್ತದೆ. ಇದು ಕ್ಯಾನ್ಸರ್ ತಡೆಗಟ್ಟುವ ಗುಣವೂ ಹೊಂದಿದೆ.

ಪಾಲಕ್ ಸೊಪ್ಪು

ಪಾಲಕ್‌ನಲ್ಲಿ ಇರುವ ಲ್ಯೂಟಿನ್ ಕಣ್ಣಿನ ಆರೋಗ್ಯಕ್ಕೆ ಉತ್ತಮವಾದ ಆ್ಯಂಟಿಆಕ್ಸಿಡೆಂಟ್. ಫೋಲಿಕ್ ಆಮ್ಲವು ಡಿಎನ್ಎ ದುರಸ್ತಿ ಕಾರ್ಯಕ್ಕೆ ಸಹಾಯ ಮಾಡುವುದರಿಂದ ಚರ್ಮದ ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ.

Share post:

Subscribe

spot_imgspot_img

Popular

More like this
Related

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ:...

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ ಬೆಳಗಾವಿ:...

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...