ಯಾವುದೇ ಕ್ಷಣದಲ್ಲಿ ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್!

Date:

ಯಾವುದೇ ಕ್ಷಣದಲ್ಲಿ ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್!

ಬೆಂಗಳೂರು: ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಬೇಲ್ ಪಡೆದು ಹೊರಗೆ ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಂದ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆದ ಬಳಿಕ ನಟನಿಗೆ ಬೆನ್ನು ನೋವು ಹೆಚ್ಚಾಗಿತ್ತು. ಬೆನ್ನು ನೋವಿನ ಕಾರಣ ಹೇಳಿ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದ್ರು. ಒಂದೂವರೆ ತಿಂಗಳಿಂದ ದರ್ಶನ್ ಆಸ್ಪತ್ರೆಯಲ್ಲೇ ಇದ್ದಾರೆ.
ಡಿಸೆಂಬರ್ 13ರಂದು ಹೈಕೋರ್ಟ್ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಕೆಲವರಿಗೆ ಜಾಮೀನು ಮಂಜೂರು ಮಾಡಿತ್ತು. ಆಸ್ಪತ್ರೆಯಲ್ಲಿದ್ದ ದರ್ಶನ್ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಸಿಟಿ ಸಿವಿಲ್ ಕೋರ್ಟ್ಗೆ ತೆರಳಿದ್ರು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಟ ದರ್ಶನ್ ಮತ್ತೆ ಆಸ್ಪತ್ರೆ ದಾಖಲಾಗಿದ್ದರು.
ಇದೀಗ ಇಂದು BGS ಆಸ್ಪತ್ರೆಯಿಂದ ನಟ ದರ್ಶನ್ ಡಿಸ್ಚಾರ್ಜ್ ಆಗಲಿದ್ದಾರೆ. ಸರ್ಜರಿ ಇಲ್ಲದೇ ದರ್ಶನ್ ಇಂದೇ ಡಿಸ್ಚಾರ್ಜ್ ಆಗುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಟ್ರೀಟ್ಮೆಂಟ್ ಪಡೆಯಲಿದ್ದಾರೆ ಎನ್ನಲಾಗಿದೆ. ದರ್ಶನ್ ಆಸ್ಪತ್ರೆಯಲ್ಲಿ ಫಿಜಿಯೋಥೆರಫಿ ಚಿಕಿತ್ಸೆಗೆ ಒಳಗಾಗಿದ್ದು ಮನೆಯಲ್ಲಿ ಅದನ್ನೇ ಮುಂದುವರೆಸಲಿದ್ದಾರೆ.
ಬೇಲ್ ಪ್ರಕ್ರಿಯೆ ಮುಗಿಸಲು ನಟ ದರ್ಶನ್ ಡಿ.16ರಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ಗೆ ತರಳಿದ್ದರು. ಕೋರ್ಟ್ನಲ್ಲೂ ನಿಲ್ಲೋಕೂ ನಡೆದಾಡೋಕು ಆಗದೆ ಪರದಾಡ್ತಿದ್ರು. ಆ ಬಳಿಕ ಬೇಲ್ ಪ್ರಕ್ರಿಯೆ ಮುಗಿಸಿ ವಾಪಸ್ ಆಸ್ಪತ್ರೆಗೆ ದರ್ಶನ್ ತೆರಳಿದ್ದ ದರ್ಶನ್ ಇಂದು ಡಿಸ್ಚಾರ್ಜ್ ಆಗಲಿದ್ದಾರೆ.

Share post:

Subscribe

spot_imgspot_img

Popular

More like this
Related

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು?

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು? ನಮ್ಮ...

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...