ಯಾವ ದಲಿತ ಲೀಡರ್ನನ್ನ ನೀವು ಉದ್ಧಾರ ಮಾಡಿದ್ದಿರಿ? ಕಾಂಗ್ರೆಸ್ ಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ?
ಕಲಬುರ್ಗಿ:- ಯಾವ ದಲಿತ ಲೀಡರ್ನನ್ನ ನೀವು ಉದ್ಧಾರ ಮಾಡಿದ್ದಿರಿ? ಎಂದು ಕಾಂಗ್ರೆಸ್ ಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಚಿನ್ ಪಾಂಚಾಳ್ ಆತ್ಮಹತ್ಯೆ ಕೇಸ್ ಸಿಬಿಐಗೆ ಕೊಡಬೇಕು. ಅಂದಾಗ ಮಾತ್ರ ನ್ಯಾಯ ಸಿಗುತ್ತೆ. ಇದರ ಹಿಂದೆ ಕೇವಲ ಸುಪಾರಿ ಗ್ಯಾಂಗ್ ಅಷ್ಟೇ ಅಲ್ಲ, ಹನಿಟ್ರ್ಯಾಪ್ ಗ್ಯಾಂಗ್ ಇದೆ. ನಿಮ್ಮಿಂದ ಕಲ್ಯಾಣ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ದಲಿತ ಲೀಡರ್ ತಲೆ ಎತ್ತಿಲ್ಲ. ಯಾವ ದಲಿತ ಲೀಡರ್ನನ್ನ ಉದ್ಧಾರ ಮಾಡಿದ್ದಿರಿ. ನನ್ನನ್ನು ಕೆಣಕಿದರೆ ನಾನು ಕುಟುಕದೇ ಬಿಡಲ್ಲ ಎಂದರು.
ಕಾಂಗ್ರೆಸ್ಸಿಗರೇ ನಿಮ್ಮಲ್ಲಿ 3 ಬಾರಿ ಗೆದ್ದ ಅನೇಕ ದಲಿತರು ಶಾಸಕರಿದ್ದಾರೆ. ಅವರನ್ನೇಕೆ ಮಂತ್ರಿ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವವಿದೆ, ಅವರ ಬಗ್ಗೆ ಮಾತನಾಡಲ್ಲ. ಖರ್ಗೆ ಸಾಹೇಬ್ರೆ ನೀವು ಧರ್ಮಸಿಂಗ್ ಅವರು ಸ್ನೇಹಿತರಿದ್ದೀರಿ. ಅವರ ಮಗ ಡಾ.ಅಜಯ್ ಸಿಂಗ್ ಸತತ ಮೂರು ಭಾರಿ ಗೆದ್ದಿದ್ದಾರೆ. ಅವರನ್ನೇಕೆ ಮಂತ್ರಿ ಮಾಡಿಲ್ಲ. ನಿಮ್ಮ ಮಗ ಎಲ್ಲರಿಗಿಂತ ಮೇದಾವಿಯಾ? ಇಲ್ಲಿ ಜಾತಿ, ಧರ್ಮವಿಲ್ಲ ಮಾನವೀಯತೆ ಮುಖ್ಯ. ಸಚಿನ್ ಕಟುಂಬಕ್ಕೆ ನ್ಯಾಯ ಕೊಡಬೇಕು. ನಿಮ್ಮ ಉಸ್ತುವಾರಿಯ ಕಲಬುರಗಿಯಲ್ಲಿ ಅರಾಜಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇನ್ನೂ ಸಚಿನ್ ಪಾಂಚಾಳ್ ಆತ್ಮಹತ್ಯೆ ಕೇಸ್ ಸಂಬಂಧ ನ್ಯಾಯ ಕೊಡಿ ಅಂದರೆ ಎಳನೀರು, ಟೀ ಕಾಫಿ ಕೊಡುತ್ತೇವೆ ಅಂತಾರೆ. ನಾವು ನಿಮ್ಮ ಸಂದಾನಕ್ಕೆ ಬಂದಿದ್ದೀವಾ? ನಾಲ್ಕು ಜನರನ್ನು ನಿಲ್ಲಿಸಿ ಎಳನೀರು ಕೊಡ್ತೀವಿ ಅಂತಿರಲ್ಲ ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದಾರೆ.