ಯುವರಾಜ್​ ಸಿಂಗ್​ಗೆ ಚಿಕಿತ್ಸೆ ನೀಡಿದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ : ಕ್ಯಾನ್ಸರ್ ಗೆದ್ದು ಬಂದ ಮುತ್ತಪ್ಪ ರೈ!

Date:

ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಕ್ಯಾನ್ಸರ್ ಗೆದ್ದು ಬಂದಿರುವ ಬಗ್ಗೆ ನಿಮಗೆ ಗೊತ್ತೇ ಇದೆ. 2011ರಲ್ಲಿ ಕ್ಯಾನ್ಸರ್ ನಡುವೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವಿ, ಬಳಿಕ ಕ್ಯಾನ್ಸರ್ ಗೆದ್ದು ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಆಗಿದ್ದೂ ಇತಿಹಾಸ. ಹೀಗೆ ಯುವರಾಜ್ ಸಿಂಗ್​ಗೆ ಚಿಕಿತ್ಸೆ ನೀಡಿದ್ದ ವೈದ್ಯರು ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈಗೂ ಚಿಕಿತ್ಸೆ ನೀಡುತ್ತಿದ್ದಾರೆ.
ನಂಗೆ ಕ್ಯಾನ್ಸರ್‌ ಇರುವುದು ದೃಢಪಟ್ಟಿದ್ದು, ಆತ್ಮವಿಶ್ವಾಸದಿಂದ ಸಾವಿನೊಂದಿಗೆ ಹೋರಾಡುತ್ತಾ ಬದುಕಿದ್ದೇನೆ. ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ, ಆದರೆ ಜೀವ ಇರುವಷ್ಟು ದಿನ ಜನರ ಸೇವೆ ಮಾಡುತ್ತೇನೆ ಎಂದು ಕ್ಯಾನ್ಸರ್ ಜಯಿಸಿ ಬಂದಿರುವ ಮುತ್ತಪ್ಪ ರೈ ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.
ಅವರ ಆರೋಗ್ಯದ ಕುರಿತು ಹಬ್ಬಿದ್ದ ಅಂತೆಕಂತೆಗಳಿಗೆ ತೆರೆ ಎಳೆದ ಅವರು ಸುದ್ದಿಗೋಷ್ಠಿ ಮೂಲಕ ಹೊಸ ಗೆಟಪ್​ನಲ್ಲಿ, ಹೊಸ ಹುರಪಲ್ಲಿ ಕಾಣಿಸಿಕೊಂಡರು, ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಹಕ್ಕೆ ಐದು ಗುಂಡುಗಳು ಬಿದ್ದಾಗ ಸಾವಿನೊಂದಿಗೆ ಹೋರಾಡಿ ಬದುಕಿದೆ. ನನ್ನ ಟಿಕೆಟ್‌ ಯಾವಾಗಲೊ ಬುಕ್‌ ಆಗಿ ಹೋಗಿದೆ. ನನ್ನ ಆತ್ಮವಿಶ್ವಾಸದ ಮೇಲೆ ಆಯಸ್ಸು ನಿಂತಿದೆ. ಕ್ಯಾನ್ಸರ್‌ ಮೆದುಳಿನ ಭಾಗಕ್ಕೂ ವಿಸ್ತರಿಸಿದೆ. ಯುವರಾಜ್‌ ಸಿಂಗ್‌ಗೆ ಚಿಕಿತ್ಸೆ ನೀಡಿದ ವೈದ್ಯ ನಿತೇಶ್‌ ರೋಹಟಗಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಸಾವಿಗೆ ಅಂಜುತ್ತಿಲ್ಲ ಎಂದು ಎಂಥವರಿಗೂ ಚೈತನ್ಯ ತುಂಬುವ ನುಡಿಗಳನ್ನಾಡಿದರು.

ಇಂಜೆಕ್ಷನ್ ಬದಲು ಬಡವರಿಗೆ ಹಣ : ಮುತ್ತಪ್ಪ ರೈ ಸಾವು – ಬದುಕಿನ ಹೋರಾಟದ ನಡುವೆ ತಮ್ಮ ಚಿಕಿತ್ಸೆ ಬದಲು ಬಡವರಿಗೆ ಹಣ ನೀಡುವ ಚಿಂತನೆ ಮಾಡಿ ತನ್ನ ಜನಪರ, ಬಡವರ ಪರ ಕಾಳಜಿ ಮೆರೆದಿದ್ದಾರೆ.
ಡಾಕ್ಟರ್​ ನಾನು ಆರು ತಿಂಗಳು ಮಾತ್ರ ಬದುಕುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಆಗ ನನಗೇನು ಅದರಿಂದ ಶಾಕ್‌ ಆಗಲಿಲ್ಲ. ದಿಲ್ಲಿಯ ವೈದ್ಯರು ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಒಂದು ಇಂಜೆಕ್ಷನ್‌ಗೆ 7 ಕೋಟಿ ಖರ್ಚು ಮಾಡಿ ಎರಡು ಇಂಜೆಕ್ಷನ್‌ ತೆಗೆದುಕೊಂಡು ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ ನಿವಾರಣೆಯಾಗಲಿದೆ ಎಂದು ಸಲಹೆ ನೀಡಿದ್ದರು. 68 ವರ್ಷ ವಯಸ್ಸಿನ ನಾನು ಅಷ್ಟೊಂದು ಹಣ ಖರ್ಚು ಮಾಡಿ ನಂತರ ಬದುಕಿ ಏನು ಮಾಡಬೇಕಿದೆ ಎಂದು ಸುಮ್ಮನಾದೆ. ಅದೇ ಹಣವನ್ನು ಬಡವರಿಗೆ ವಿನಿಯೋಗಿಸಲು ನಿರ್ಧರಿಸಿದ್ದೇನೆ ಎಂದು ಹೇಳುವ ಮೂಲಕ ಬಡವರ ಬಗೆಗಿನ ಪ್ರೀತಿ ಮೆರೆದಿದ್ದಾರೆ.

ಜೊತೆಗಿದ್ದವರ ಹೆಸರಿಗೆ ವಿಲ್ : ಇನ್ನು ಮುತ್ತಮ್ಮ ರೈ, ಹಲವು ವರ್ಷಗಳಿಂದ ತನ್ನೊಡನೆ ಇರುವ ಜನರಿಗೆ ಆಸ್ತಿಯಲ್ಲಿ ಪಾಲು ನೀಡಲು ಸ್ವ ಇಚ್ಛೆಯಿಂದ ವಿಲ್‌ ಮಾಡಿರುವುದಾಗಿ ತಿಳಿಸಿದ್ದಾರೆ. ಬಹುಕಾಲದಿಂದ ತನ್ನ ಬೆನ್ನಿಗೆ ನಿಂತ ಕೆಲವು ಕಾರ್ಯಕರ್ತರಿಗೆ ಒಂದೊಂದು ಸೈಟ್‌ ನೀಡುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಲು ಚಾರಿಟಬಲ್‌ ಟ್ರಸ್ಟ್‌ ಸ್ಥಾಪಿಸುವುದಾಗಿಯೂ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...