ಮುಟ್ಟಾದಾಗ ಮಹಿಳೆಯರು ದೇವಸ್ಥಾನ ಪ್ರವೇಶಿಸಬಾರದು ಎಂದು ಹೇಳುತ್ತಾರೆ. ಅಂತೆಯೇ ಮಹಿಳೆಯರು ಪಿರಿಯಡ್ಸ್ ಟೈಮ್ನಲ್ಲಿ ದೇವಾಲಯಕ್ಕೆ
ಇದು ಗುವಾಹಟಿಯ ನೀಲಾಚಲ್ ಪರ್ವತದ ಮೇಲಿರು ಕಾಮಖ್ಯ ದೇವಿ ದೇವಾಲಯ. ಇಲ್ಲಿನ ದೇವತೆಯನ್ನು ರಕ್ತಸ್ರಾವದ ದೇವತೆ ಎನ್ನುತ್ತಾರೆ. ಇಲ್ಲಿ ಗರ್ಭಗುಡಿಯಲ್ಲಿನ ದೇವಿಯ ಗರ್ಭ ಮತ್ತು ಯೋನಿಯನ್ನೇ ಪೂಜಿಸುತ್ತಾರೆ..!
ದೇವಿಯು ಋತುಮತಿಯಾಗುತ್ತಾಳೆ ಎಂದು ನಂಬಿಕೆ ಇದೆ… ಅದೇರೀತಿ ಪ್ರತಿವರ್ಷ ಆಷಾಢ ಮಾಸದಲ್ಲಿ (ಜೂನ್) ಈ ದೇವಾಲಯದ ಬಳಿಯಲ್ಲಿರುವ ಬ್ರಹ್ಮಪುತ್ರ ನದಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಸಮಯದಲ್ಲಿ ದೇವಿಗೆ ಋತುಸ್ರಾವವಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಋತುಸ್ರಾವವನ್ನು ಕೆಲವರು ಕೆಟ್ಟದಾಗಿ ನೋಡುತ್ತಾರೆ. ಅಪವಿತ್ರ ಎನ್ನುತ್ತಾರೆ. ಕೆಲವು ಕಡೆ ಇಂದಿಗೂ ಪಿರಿಯಡ್ಸ್ ಟೈಮ್ನಲ್ಲಿ ಮಹಿಳೆಯರನ್ನು ಮುಟ್ಟಲ್ಲ. ದೇವಾಲಯಕ್ಕೆ ಅವರು ಹೋಗುವುದಂತೂ ದೂರದ ಮಾತು. ಅದನ್ನು ಪ್ರಶ್ನೆ ಮಾಡೋ ಹಕ್ಕು ಕೂಡ ಯಾರಿಗೂ ಇಲ್ಲ. ಯಾಕಂದರೆ ಯಾರ ನಂಬಿಕೆ, ಸಂಪ್ರದಾಯವನ್ನು ಟೀಕಿಸುವ ಹಕ್ಕು ಯಾರಿಗೂ ಇಲ್ಲ. ಈ ದೇವಾಲಯದಲ್ಲಿ ಮಹಿಳೆಯ ಈ ವಿಶೇಷತೆಯನ್ನು ತಾಯಿಯಾಗುವ ಪ್ರಕ್ರಿಯೆಗೆ ಹೋಲಿಸುತ್ತಾರೆ. ಈ ದೇವಾಲಯದಲ್ಲಿ ದೇವಿ ಶಕ್ತಿ ರೂಪದಲ್ಲಿದ್ದಾಳೆಂದು ಭಕ್ತರು ಪೂಜಿಸುತ್ತಾರೆ.
ರಕ್ತಸ್ರಾವದ ದೇವತೆ ಋತುಮತಿಯಾದಾಗ ಯೋನಿಗೆ ಪೂಜೆ ಮಾಡ್ತಾರೆ..!
Date: