ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ರಣವಿಕ್ರಮ’ ಸಿನಿಮಾದ ಬೆಡಗಿ ಅದಾ ಶರ್ಮಾ ಅವರ ನಗ್ನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹಾಗೆಂದ ಮಾತ್ರಕ್ಕೆ ಇದು ಯಾರೋ ಕಿಡಿಗೇಡಿಗಳು ಹರಿಬಿಟ್ಟ ನಕಲಿ ಫೋಟೋ ಅಲ್ಲ.ಅದೇರೀತಿ ಅದು ಎಲ್ಲೋ ಅದಾಗೆ ಗೊತ್ತಾಗದೆ ಹರಿದಾಡಿದ ಫೋಟೋ ಅಲ್ಲ. ಬದಲಾಗಿ ಅದಾ ಅವರೇ ಪೋಸ್ಟ್ ಮಾಡಿರುವ ಫೋಟೋ..!
ಅದಾ ಹಿಂದಿ ಭಾಷೆಯ ಅಂದರೆ ಬಾಲಿವುಡ್ನ ಮ್ಯಾನ್ ಟು ಮ್ಯಾನ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಆ ಸಿನಿಮಾದ ಪ್ರಮೋಶನ್ಗಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಗ್ನ ಫೋಟೋವನ್ನು ಹಾಕಿಕೊಂಡಿದ್ದಾರೆ. ಫೋಟದಲ್ಲಿ ತಲೆಕೂದಲನ್ನು ಬಿಟ್ಟುಕೊಂಡಿದ್ದು, ನಕಲಿ ಮೀಸೆಯನ್ನೂ ಹಾಕಿಕೊಂಡಿದ್ದಾರೆ.
ಆ ಫೋಟೋವನ್ನು ಹಾಕಿರುವ ಅದಾ “ನಾನು ನಿಮ್ಮ ಕನಸಿನ ಯುವಕನಾ? ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಅದಲ್ಲದೆ ನನ್ನ ಮುಂದಿನ ಸಿನಿಮಾ ನನ್ನ ಮುಂದಿನ ಹಿಂದಿ ಚಿತ್ರ ಮ್ಯಾನ್ ಟು ಮ್ಯಾನ್ . ನಾನು ನಟಿ ಆದಾಗ ನಾನು ಈ ರೀತಿಯ ಪಾತ್ರ ನಿರ್ವಹಿಸುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ಇದೊಂದು ರೊಮ್ಯಾಂಟಿಕ್ ಚಿತ್ರ ಆಗಿದೆ… ಇದು ವಿಭಿನ್ನ ಲವ್ ಸ್ಟೋರಿ ಚಿತ್ರದಲ್ಲಿದೆ. ಮಿಕ್ಕಿದ್ದು ನಿಮ್ಮ ಕಲ್ಪನೆಗೆ ಬಿಡುತ್ತೇನೆ ಎಂದಿದ್ದಾರೆ.
ಈ ಮ್ಯಾನ್ ಟು ಮ್ಯಾನ್ ಚಿತ್ರಕ್ಕೆ ನವೀನ್ ಕಸ್ತೂರಿಯಾ ನಾಯಕ. ಅಬೀರ್ ಸೆನ್ಗುಪ್ತಾ ನಿರ್ದೇಶಕ.
‘ರಣವಿಕ್ರಮ’ ಬೆಡಗಿಯ ನಗ್ನ ಫೋಟೋ ವೈರಲ್..!
Date: