ರಸ್ತೆ ಅಪಘಾತ: ಖಾಸಗಿ-ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ- ತಪ್ಪಿದ ದುರಂತ, ಹಲವರಿಗೆ ಗಾಯ!
ಕಾರವಾರ:- ಖಾಸಗಿ-ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಹಲವರಿಗೆ ಗಾಯವಾಗಿರುವ ಘಟನೆ ಮುಂಡಗೋಡ ತಾಲೂಕಿನ ಶಿರಸಿ ರಸ್ತೆಯ ನಂದಿಪುರ ಬಳಿ ಜರುಗಿದೆ. ಪರಿಣಾಮ ಹಲವರಿಗೆ ಗಂಭೀರ ಗಾಯವಾಗಿದೆ.
ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ KSRTC ಬಸ್, ಶಿರಸಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಿಂದ ರಸ್ತೆ ಸಂಚಾರಕ್ಕೂ ಅಡಚಣೆಯಾಗಿದೆ.
ಓರ್ವ ವೃದ್ದೆಯ ಕೈಗೆ ಗಂಭೀರ ಗಾಯವಾಗಿದೆ. ಇವರುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.