ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತೆಲುಗಿನ ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ಕುರಿತು ವ್ಯಂಗ್ಯವನ್ನು ಮಾಡಿದ್ದಾರೆ. ಹೌದು ಅಸಿಸ್ಟೆಂಟ್ ನಿರ್ದೇಶಕನೊಬ್ಬ ದರ್ಶನ್ ಅವರಿಗೆ ಸಿನಿಮಾ ಮಾಡಲು ನನ್ನ ಬಳಿ ಕಥೆ ಇದೆ ಎಂದು ಸಂದೇಶ್ ನಾಗರಾಜ್ ಅವರ ಬಳಿ ಹೇಳಿದಾಗ ಅವರು ಆತನನ್ನು ದರ್ಶನ್ ಅವರ ಬಳಿಗೆ ಕಳುಹಿಸಿದ್ದರು.
ಹೀಗೆ ಬಂದವನು ದರ್ಶನ್ ಅವರಿಗೆ ಕಥೆ ಹೇಳಲು ಶುರು ಮಾಡಿದಾಗ ಸರ್ ನಾನು ರಾಜಮೌಳಿ ಅವರ ಬಳಿ ಅಸಿಸ್ಟಂಟ್ ನಿರ್ದೇಶಕನಾಗಿ ಕೆಲಸ ಮಾಡಿದ್ದೆ ಎಂದು ಹೇಳಿಕೊಂಡನಂತೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ದರ್ಶನ್ ಅವರು ನೀನು ರಾಜಮೌಳಿ ಅವರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೆ ಸರಿ ಅವರು ಒಬ್ಬ ನಿರ್ದೇಶಕರೇ ಹೊರತು ಅವರಿಗೇನು 2 ಕೊಂಬು ಇಲ್ಲ ಎಂದು ಹೇಳಿದ್ದಾರೆ. ರಾಜಮೌಳಿ ಒಬ್ಬ ನಿರ್ದೇಶಕ ಅಷ್ಟೆ ಅವರೇನೂ ನನಗೆ ಎಕ್ಸ್ ಟ್ರಾರ್ಡಿನರಿ ಅಲ್ಲ ಎಂದು ದರ್ಶನ್ ವ್ಯಂಗ್ಯವಾಡಿದ್ದಾರೆ.
ಹೀಗೆ ಪರಭಾಷೆಯ ನಿರ್ದೇಶಕ ನನ್ನು ಹೊಗಳಲು ಮುಂದಾಗಿದ್ದ ಅಸಿಸ್ಟೆಂಟ್ ಡೈರೆಕ್ಟರ್ ಗೆ ದರ್ಶನ್ ಅವರು ಸ್ಥಳದಲ್ಲಿಯೇ ಟಾಂಗ್ ನೀಡಿದ್ದರು ಆದರೆ ಇದೀಗ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಲು ಕಾರಣವಾಗುತ್ತಿದೆ.