ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಕಳಪೆ: ಬೆಂಗಳೂರು, ಮಂಗಳೂರು ನಗರವಾಸಿಗಳಿಗೆ ಆತಂಕ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ ನಿರಂತರ ಏರುಪೇರಾಗುತ್ತಿದ್ದು, ನಗರವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಕೆಲವೊಮ್ಮೆ AQI 200ರ ಗಡಿ ದಾಟುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಎನ್ನಲಾಗಿದೆ.
ಇದೀಗ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಇನ್ನಷ್ಟು ಕಳಪೆಯಾಗಿದೆ. ಇಂದು ಬೆಂಗಳೂರಿನ AQI 169 ಆಗಿದ್ದು, ಅನಾರೋಗ್ಯಕರ ಹಂತದಲ್ಲಿದೆ. ಮಂಗಳೂರಿನಲ್ಲಿ AQI 185ಕ್ಕೆ ತಲುಪಿದ್ದು, ತೀರಾ ಕಳಪೆ ಮಟ್ಟಕ್ಕೆ ಕುಸಿದಿದೆ. ಮಂಗಳೂರಿನಲ್ಲಿ PM2.5 ಪ್ರಮಾಣ 84 ಹಾಗೂ PM10 ಪ್ರಮಾಣ 116ಕ್ಕೆ ಏರಿಕೆಯಾಗಿದೆ. ಈ ಮಟ್ಟಗಳು ಸುರಕ್ಷಿತ ಮಿತಿಯನ್ನು ಮೀರಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಶೇಷವಾಗಿ PM2.5 ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ, ಆಸ್ತಮಾ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ವಾಹನಗಳ ಅತಿಯಾದ ಬಳಕೆ, ನಿರ್ಮಾಣ ಕಾರ್ಯಗಳಿಂದ ಉಂಟಾಗುವ ಧೂಳು, ಕೈಗಾರಿಕಾ ಉತ್ಸರ್ಜನೆ ಹಾಗೂ ಗಾಳಿಯ ಚಲನೆಯ ಕೊರತೆ ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಇಂದು ರಾಜ್ಯದ ಇತರ ನಗರಗಳ AQI ಸ್ಥಿತಿ ಹೀಗಿದೆ:
ಬೆಂಗಳೂರು – 169
ಮಂಗಳೂರು – 185
ಮೈಸೂರು – 104
ಬೆಳಗಾವಿ – 80
ಕಲಬುರ್ಗಿ – 84
ಶಿವಮೊಗ್ಗ – 64
ಬಳ್ಳಾರಿ – 168
ಹುಬ್ಬಳ್ಳಿ – 86
ಉಡುಪಿ – 171
ವಿಜಯಪುರ – 68
ಗಾಳಿಯ ಗುಣಮಟ್ಟದ ಮಟ್ಟಗಳು:
ಉತ್ತಮ – 0 ರಿಂದ 50
ಮಧ್ಯಮ – 50 ರಿಂದ 100
ಕಳಪೆ – 100 ರಿಂದ 150
ಅನಾರೋಗ್ಯಕರ – 150 ರಿಂದ 200
ಗಂಭೀರ – 200 ರಿಂದ 300
ಅಪಾಯಕಾರಿ – 300 ರಿಂದ 500ಕ್ಕೂ ಹೆಚ್ಚು






