ರಾಜ್ಯದಲ್ಲಿ ಮತ್ತೆ ಕೊರೊನಾ ಅಟ್ಟಹಾಸ: ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಸೋಂಕು ದೃಢ
ಬೆಂಗಳೂರು: ಇಡೀ ಜಗತ್ತನ್ನೇ ಕಾಡಿದ್ದ ಮಹಾಮಾರಿ ಕೊರೊನಾ ವೈರಸ್ ಈಗ ಮತ್ತೆ ಆತಂಕ ಹುಟ್ಟಿಸುತ್ತಿದೆ. ಹಲವು ದೇಶಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದಕ್ಕೆ ಕೊರೊನಾ ರೂಪಾಂತರ ತಳಿ ಕಾರಣ ಎನ್ನಲಾಗಿದೆ.
ಆದರೆ, ಕರ್ನಾಟಕದಲ್ಲೂ ಈಗ ಕೊರೊನಾ ಸೋಂಕು ನಿಧಾನಕ್ಕೆ ಏರುಗತಿಯಲ್ಲಿ ಸಾಗುತ್ತಿರುವುದು ಆತಂಕ ಹುಟ್ಟಿಸಿದೆ. ಹೌದು ಬೆಂಗಳೂರು ನಗರದಲ್ಲಿಯೇ 32 ಸಕ್ರಿಯ ಪ್ರಕರಣಗಳಿದ್ದು, ಸದ್ಯ ಮತ್ತಿಬ್ಬರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ.
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೊವಿಡ್ ಪಾಸಿಟಿವ್ ಬಂದಿದ್ದು, ಇದೀಗ ನಗರದ ಮಲ್ಲೇಶ್ವರಂನಲ್ಲಿ 45 ವರ್ಷದ ಮತ್ತು ರಾಜಾಜಿನಗರದಲ್ಲಿ 38 ವರ್ಷದ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೊವಿಡ್ ಪಾಸಿಟಿವ್ ಬಂದಿದ್ದು, ಸದ್ಯ ಕೊವಿಡ್ ಸೋಂಕಿತರು ಹೋಮ್ ಐಸೋಲೇಷನ್ನಲ್ಲಿದ್ದಾರೆ.



