ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲೂ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರೆಡ್ ಅಲರ್ಟ್
ಉತ್ತರ ಕನ್ನಡ
ದಕ್ಷಿಣ ಕನ್ನಡ
ಉಡುಪಿ
ಹಾಸನ
ಶಿವಮೊಗ್ಗ
ಚಿಕ್ಕಮಗಳೂರು
ಈ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಆರೆಂಜ್ ಅಲರ್ಟ್
ಬೆಳಗಾವಿ
ಧಾರವಾಡ
ಹಾವೇರಿ
ಬೀದರ್
ಕಲಬುರಗಿ
ಯಾದಗಿರಿ
ವಿಜಯಪುರ
ರಾಯಚೂರು
ಗದಗ
ಬಾಗಲಕೋಟೆ
ಕೊಪ್ಪಳ
ಯೆಲ್ಲೋ ಅಲರ್ಟ್
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಮೈಸೂರು
ಮಂಡ್ಯ
ರಾಮನಗರ
ತುಮಕೂರು
ಹಾಗೂ ಇತರೆ ಜಿಲ್ಲೆಗಳು
ಬೆಂಗಳೂರು ನಗರದಲ್ಲಿ ಕೆಲವೆಡೆ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ದೇಶದ ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಮಧ್ಯಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಎರಡು ದಿನ ಭಾರೀ ಮಳೆ
ಆಂಧ್ರಪ್ರದೇಶ ಕರಾವಳಿ, ದಕ್ಷಿಣ ಛತ್ತೀಸ್‌ಗಢ, ದಕ್ಷಿಣ ಒಡಿಶಾ, ತೆಲಂಗಾಣ, ಕರ್ನಾಟಕ ಒಳನಾಡು ಭಾಗಗಳಲ್ಲೂ ಮಳೆ ಹೆಚ್ಚಾಗಲಿದೆ. ಮುಂಬೈ, ಗೋವಾ, ಕೊಂಕಣ, ಮಹಾರಾಷ್ಟ್ರ ಘಾಟ್ ಹಾಗೂ ಗುಜರಾತ್‌ನಲ್ಲಿ ಆಗಸ್ಟ್ 19 ಮತ್ತು 20ರಂದು ಧಾರಾಕಾರ ಮಳೆ ಮುನ್ಸೂಚಿಸಲಾಗಿದೆ.