ಚಾಲೆಂಜಿಂಗ್ ಸ್ಟಾರ್ ಒಂದರ ಮೇಲೆ ಒಂದು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. 2019 ರಲ್ಲಿ ದರ್ಶನ್ ಸಿನಿಮಾಗಳದ್ದೇ ಅಬ್ಬರವಾಗಿತ್ತು. ಯಜಮಾನ, ಕುರುಕ್ಷೇತ್ರ, ಒಡೆಯ ಹೀಗೆ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ದರ್ಶನ್ ವರ್ಷದ ಕೊನೆಯಲ್ಲಿ ರಾಬರ್ಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ರಾಬರ್ಟ್ ಚಿತ್ರತಂಡ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಫ್ರೆಂಡ್ ಹೇರ್ ಸ್ಟೈಲ್ , ಬ್ಲಾಕ್ ಜಾಕೆಟ್ , ಕುತ್ತಿಗೆಯಲ್ಲಿ ಶಿಲುಬೆಯ ಸರ, ಕೈಯಲ್ಲಿ ಗನ್ ಹಿಡಿದು ಕಾಣಿಸಿಕೊಂಡಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಇದಾಗಿದ್ದು, ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಆಶಾಭಟ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿನೋದ್ ಪ್ರಭಾಕರ್ ಗೆಳೆಯ ದರ್ಶನ್ ಜೊತೆ ನಟಿಸಿದ್ದಾರೆ. ಚಿತ್ರ ಯುಗಾದಿ ಹಬ್ಬಕ್ಕೆ ತೆರೆ ಕಾಣುವ ಸಾಧ್ಯತೆ ಇದೆ.
ಕ್ರಿಸ್ ಮಸ್ ಹಬ್ಬದಲ್ಲಿ ದರ್ಶನ ನೀಡಿದ ರಾಬರ್ಟ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.