ಚಿಕ್ಕೋಡಿ: 500 ವರ್ಷಗಳ ನಂತರ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಹೋಗದೇ ಇರುವುದು ನಿಮ್ಮ ದೌರ್ಭಾಗ್ಯ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ಆಮಂತ್ರಣ ಕಾಂಗ್ರೆಸ್ ಪಕ್ಷದಿಂದ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಉದ್ಘಾಟನೆಗೆ ಹೋಗುವುದು ಬಿಜೆಪಿಗೆ ಆರ್ಎಸ್ಎಸ್ಗೆ ನಮಸ್ಕಾರ ಮಾಡಲು ಅಲ್ಲ.
ರಾಮನಿಗೆ ನಮಸ್ಕಾರ ಮಾಡಲು ಹೋಗುವುದು. 500 ವರ್ಷಗಳ ನಂತರ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಹೋಗದೇ ಇರುವುದು ನಿಮ್ಮ ದೌರ್ಭಾಗ್ಯ. ನಿಜವಾಗಿಯೂ ಹಿಂದೂಗಳ ರಾಮನ ಶಾಪ ನಿಮಗೆ ತಟ್ಟುತ್ತದೆ. ಭಾಗವಹಿಸಿದ್ದರೆ ನೀವು ಹಿಂದೂ ಸಮಾಜದ ಜೊತೆ ಒಂದಾಗುತಿದ್ದರೆ ನಿಮಗೂ ರಾಮನ ಕೃಪೆ ಸಿಗುತ್ತಿತ್ತು. ಪಾಪಿಷ್ಟರ ಜೊತೆ ರಾವಣನ ಮನಸ್ಥಿತಿಯವರು ನೀವು ತಿರಸ್ಕಾರ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಅಕ್ಷಮ್ಯ ಅಪರಾಧ ಮಾಡಿ ಕಾಂಗ್ರೆಸ್ನವರು ತಪ್ಪು ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಹೋಗದೇ ಇರುವುದು ನಿಮ್ಮ ದೌರ್ಭಾಗ್ಯ !
Date: